ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ವಿಡಿಯೋ ವೈರಲ್ ಮಾಡಿದ 8 ಜನರ ಬಂಧನ

ಪುತ್ತೂರಿನ ಕಾಲೇಜೊಂದರ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೋ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದು ಈ ಬಗ್ಗೆ ದಿನಾಂಕ 03.07.2019 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:66/2019 ಕಲಂ: 66 E, 67 A, IT Act 2000 & ಕಲಂ: 4, 6 Indecent Reprentition of Women ( Prohibition) Act – 1986 ಸು-ಮೋಟೊ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ತನಿಖೆ ನಡೆಸಲಾಗಿದೆ .

ಪುತ್ತೂರಿನ ಖಾಸಗಿ ಕಾಲೇಜೊಂದರ ವಿಧ್ಯಾರ್ಥಿಯಾದ ಬಂಟ್ವಾಳ ನಿವಾಸಿ ಪ್ರಖ್ಯಾತ್ ಎಂಬಾತನು ತಾನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ಮೊಬೈಲ್ ನ ಒಂದು ಅ್ಯಪ್ ನಲ್ಲಿ ಸ್ಟೇಟಸ್ ಹಾಕಿ ಕೊಂಡಿದ್ದು ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್‌ ಎಂಬಾತನು ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿರುತ್ತಾನೆ. ಕಾಲೇಜಿನ ವಿದ್ಯಾರ್ಥಿಗಳ ಚುನಾವಣೆ ಸಮಯ ಗುಂಪು-ಗುಂಪುಗಳಾಗಿ ವಿದ್ಯಾರ್ಥಿಗಳು ವೈಷಮ್ಯ ಬೆಳೆಸಿಕೊಂಡಿರುತ್ತಾರೆ.

ಒಂದು ಗುಂಪಿನಲ್ಲಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಕೆಲವರ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾನ್ಸ್ ಎಸ್ ಎಂಬಾತನು ತನಗೆ ಬೇರೆಯವರ ಮೂಲಕ ದೊರೆತ ಈ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿರುವುದಾಗಿದೆ.

ಈ ಪ್ರಕರಣದಲ್ಲಿ ವಿಡಿಯೋ ವನ್ನು ಸಾರ್ವಜನಿಕವಾಗಿ ಪ್ರಸಾರ ಪಡಿಸಿದ ಆರೋಪದಲ್ಲಿ
1)ಮುರಳೀಧರ ಪ್ರಾಯ 29 ವರ್ಷ, ಪುತ್ತೂರು ಕಸ್ಬಾ ಗ್ರಾಮ, ಪುತ್ತೂರು ತಾಲೂಕು
2) ಚಂದ್ರಶೇಖರ ಮಯ್ಯ, ಪ್ರಾಯ 47 ವರ್ಷ, ನೆಹರು ನಗರ, ಕಬಕ ಗ್ರಾಮ, ಪುತ್ತೂರು ತಾಲೂಕು
3) ಶ್ರೇಯಾನ್ಸ್ ಎಸ್. ಪ್ರಾಯ 20 ವರ್ಷ, ಕಡಬ ಪೇಟೆ ಮತ್ತು ಗ್ರಾಮ, ಪುತ್ತೂರು ತಾಲೂಕು
4) ಪೂವಪ್ಪ ಕೆ. ಪ್ರಾಯ 26 ವರ್ಷ, ಅರ್ಯಾಪು ಗ್ರಾಮ, ಪುತ್ತೂರು ತಾಲೂಕು,
5)ಪವನ್ ಕುಮಾರ್ ಡಿ. ಪ್ರಾಯ 19 ವರ್ಷ, ಅರ್ಯಾಪು ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು,
6) ಮೋಹಿತ್‌ ಪಿ ಜಿ ಪ್ರಾಯ: 18 ವರ್ಷ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು.
7) ಧ್ಯಾನ್‌ ಎ ಎನ್‌ ಪ್ರಾಯ: 18 ವರ್ಷ ಕೊಳ್ತಿಗೆ ಗ್ರಾಮ ಪುತ್ತೂರು ತಾಲೂಕು.
8) ಅದ್ವಿತ್‌ ಕುಮಾರ್‌ ನಾಯ್ಕ್‌ ಎನ್‌ ಪ್ರಾಯ: 19 ವರ್ಷ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು.ಎಂಬವರುಗಳನ್ನು ದಸ್ತಗಿರಿ ಮಾಡಿ ಕಾನೂನಿಗೆ ಒಳಪಡಿಸಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!