ತಾಕತ್ತಿದ್ದರೆ 370ನೇ ವಿಧಿಯನ್ನು ಮರಳಿ ಜಾರಿಗೊಳಿಸುತ್ತೇವೆಂದು ಹೇಳಿ:ಮೋದಿ
ನವದೆಹಲಿ: ತಾಕತ್ತಿದ್ದರೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ 370ನೇ ವಿಧಿಯನ್ನು ಮರಳಿ ಜಾರಿಗೊಳಿಸುತ್ತೇವೆಂದು ಹೇಳಿ ಎಂದು ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸವಾಲು ಹಾಕಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ 370, 35ಎ ವಿಧಿ ರದ್ದುಗೊಳಿಸಿದ್ದು ಇದನ್ನು ಮರಳಿ ಜಾರಿಗೊಳಿಸುತ್ತೇವೆಂದು ನಿಮ್ಮ ಪ್ರಣಾಳಿಕೆಯಲ್ಲಿ ಹಾಕಿ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಇನ್ನೂ ನಾಲ್ಕು ತಿಂಗಳಾದರೂ ಬೇಕಾಗುತ್ತದೆ ಎಂದರು. ಛತ್ರಪತಿ ಶಿವಾಜಿ ಮಹಾರಾಜರು ಆಳಿದ ಪವಿತ್ರ ಭೂಮಿಯಿಂದ ಈ ಸವಾಲು ಹಾಕುತ್ತಿದ್ದೇನೆ ಎಂದರು.
370ನೇ ವಿಧಿ ರದ್ದು ಕುರಿತಂತೆ ಪ್ರತಿಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಪ್ರತಿಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಾ ಅಲ್ಲಿನ ಜನರನ್ನು ಮರಳು ಮಾಡುಲು ಇನ್ನಿಲ್ಲದ ನಾಟಕವನ್ನು ಆಡುತ್ತಿದ್ದೀರಾ ಎಂದು ಆರೋಪಿಸಿದರು.
Abey Bhai talk about job creation and development of the country y ur making so much drama only on unnecessary issues.