ಸ್ವಚ್ಚಮೇವ ಜಯತೆ ಹಾಗೂ ಜಲಾಮ್ರತ ಆಂದೋಲನಕ್ಕೆ ಅಲೆವೂರು ನಲ್ಲಿ ಚಾಲನೆ
ರಾಜ್ಯಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಾಮ್ರತ ಆಂದೋಲನ ಹಾಗೂ ಸ್ವಚ್ಚಮೇವ ಜಯತೆ ಎನ್ನುವ ಕಾರ್ಯಕ್ರಮಕ್ಕೆ ಅಲೆವೂರು ಪಂಚಾಯತ್ ನಲ್ಲಿ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ರವರು ಗಿಡ ನೆಡುವ ಮುಖೇನ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನ್ನಾಡಿದ ಇವರು ಮಳೆ ನೀರ ಕೊಯ್ಲು, ಗಿಡ ನಡುವ ಮಹತ್ವ, ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿ ಎಲ್ಲ ಅಂಗನವಾಡಿಗಳಲ್ಲಿಯೂ ತಮ್ಮ ಪರಿಸರದ ಎಲ್ಲರನ್ನು ಒಗ್ಗೂಡಿಸಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಮಳೆ ನೀರ ಕೊಯ್ಲು ಮಾಹಿತಿಶಿಬಿರ ಹಮ್ಮಿಕೊಳ್ಳಬೇಕೆಂದು ಹೇಳಿದರು.
ಪಂಚಾಯತ್ ಅಭಿವ್ರಧ್ದಿ ಅಧಿಕಾರಿ ದಯಾನಂದ ಬೆಣ್ಣೂರು ಸರಕಾರದ ಆದೇಶವನ್ನು ತಿಳಿಸಿ ಗ್ರಾಮಸ್ಥರೆಲ್ಲ ಪರಿಸರ ಉಳಿಸಲು ಸಹಕಾರ ನೀಡಬೇಕೆಂದು ಆಶಿಸಿದರು. ಸಾಂಕೇತಿಕವಾಗಿ ಹಲವರಿಗೆ ಗಿಡಗಳನ್ನು ನೀಡಲಾಯಿತು. ಪಂಚಾಯತ್ ಉಪಾಧ್ಯಕ್ಷರಾದ ಜಯಲಕ್ಷ್ಮಿ ಹಂಸರಾಜ್, ಕೊರಂಗ್ರಪಾಡಿ ಗ್ರಾಮಕರಣಿಕರಾದ ಗಿರೀಶ್, ಪಂಚಾಯತ್ ಸದಸ್ಯರುಗಳಾದ ಹರೀಶ್ ಸೇರಿಗಾರ್, ಪುಷ್ಪಲತಾ ಶಕುಂತಳಾ ರಾವ್, ಪ್ರೇಮ ಕೊರಂಗ್ರಪಾಡಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಅಧ್ಯಾಪಕರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.