ಸಂಶಯಾಸ್ಪದ ರೀತಿಯಲ್ಲಿ ಅಪಘಾತಕ್ಕಿಡಾದ ಕಾರು : ಅಲೆವೂರು

ಉಡುಪಿ: ಅಲೆವೂರು ಜೋಡುರಸ್ತೆ ಬಳಿ ಒಂದು ಸಂಶಯಾಸ್ಪದ ರೀತಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ.ಜೋಡುರಸ್ತೆಯಿಂದ ಮೂಡುಅಲೆವೂರಿಗೆ ಹೋಗುವ ರಸ್ತೆಬದಿ ಮಾರುತಿ ರೀಡ್ಸ್ ಕಾರಿನ ಮುಂಭಾಗ ಮತ್ತು ಹಿಂಭಾಗದ ಅಪಘಾತ ವಾದ ಸ್ಥಿತಿಯಲ್ಲಿ ನಿಂತಿದೆ. 

ಕಾರು ಇದ್ದ  ಸ್ಥಳ ನೋಡುವಾಗ ಅಲ್ಲಿ ಯಾವುದೇ ಅಪಘಾತವಾದ ಕುರುಹುಗಳಿಲ್ಲ, ಮೇಲ್ನೋಟಕ್ಕೆ ನೋಡುವಾಗ ಬೇರೆ ಎಲ್ಲಿಯೋ ಅಪಘಾತಕ್ಕೆ ಒಳಗಾದ ಕಾರನ್ನು  ಇಲ್ಲಿ ಬಿಟ್ಟು ಹೋಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ. ಕಾರಿನ ಮಾಲಕಿ ಗೀತಾ ಎಸ್.ರಾವ್ ಎಂಬವರ ಹೆಸರಿನಲ್ಲಿದೆ .ಪೊಲೀಸರಿಗೆ ಇನ್ನಷ್ಟೇ ಮಾಹಿತಿ ಹೋಗಬೇಕಿದೆ.

Leave a Reply

Your email address will not be published. Required fields are marked *

error: Content is protected !!