ವಿವಾದಿತ ಜಮೀನು ರಾಮ ಲಲ್ಲಾ ಪಾಲು, ರಾಮ ಮಂದಿರ ನಿರ್ಮಾಣಕ್ಕೆ ‘ಸುಪ್ರೀಂ’ ಗ್ರೀನ್ ಸಿಗ್ನಲ್

ನವದೆಹಲಿ: ಇಡೀ ದೇಶದ ಜನತೆ ಕುತೂಹಲದಿಂದ ವೀಕ್ಷಿಸುತ್ತಿರುವ ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣದ ಅಂತಿಮ ತೀರ್ಪು ಪ್ರಕಟಣೆ ಸುಪ್ರೀಂ ಕೋರ್ಟ್ ನಲ್ಲಿ ಆರಂಭವಾಗಿದೆ.


ತೀರ್ಪಿನ ಪ್ರತಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ, ಶಿಯಾ ವಕ್ಫ್ ಮಂಡಳಿಯ ವಿಶೇಷ ರಜಾ ಅರ್ಜಿಯನ್ನು ವಜಾಗೊಳಿಸಿದೆ. 1946ರಲ್ಲಿ ಉತ್ತರ ಪ್ರದೇಶದ ಫೈಜಾಬಾದ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ತೀರ್ಪಿನ ವಿವರ ಹೀಗೆ ಇದೆ: 
 

ಪುರಾತತ್ವ ಇಲಾಖೆಯ ವರದಿ ಪ್ರಕಾರ ಮಸೀದಿಯನ್ನು ಕಟ್ಟಲು ದೇವಾಲಯವನ್ನು ಧ್ವಂಸ ಮಾಡಲಾಗಿದೆ ಎಂದು.
ದೇವಾಲಯವಿದ್ದ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ, ಮಸೀದಿ ಇದ್ದ ಜಾಗದಲ್ಲಿ ಇಸ್ಲಾಂನ ಮೂಲದ ಕಟ್ಟಡವಿಲ್ಲ. ಭೂಮಿಯ ಹಕ್ಕು ಕಾನೂನಿನ ಪ್ರಕಾರ ನಿರ್ಧಾರವಾಗುತ್ತದೆ.
ರಾಮ್‌ಲಾಲ್ಲಾ ವಿರಾಜ್‌ಮನ್ ನ್ಯಾಯಶಾಸ್ತ್ರದ ಘಟಕವಾಗಿದ್ದು ಅದು ರಾಮಜನ್ಮಭೂಮಿ ಅಲ್ಲ- ಸುಪ್ರೀಂ ಕೋರ್ಟ್ 

 ಸುನ್ನಿ ವಕ್ಫ್ ಬೋರ್ಡ್ ಗೆ ಪರ್ಯಾಯ ಜಾಗ ನೀಡುವಂತೆ ಸುಪ್ರೀಂ ಸೂಚನೆ. ಪರ್ಯಾಯ ಜಮೀನು ನೀಡಲು ಮೂರು ತಿಂಗಳೊಳಗೆ ನಿರ್ಧರಿಸಬೇಕು: ಸುಪ್ರೀಂ ಕೋರ್ಟ್

11:10 Nov 9 

 ಭಾರತೀಯ ಸಂವಿಧಾನ ಎಲ್ಲಾ ಧರ್ಮಗಳಿಗೂ ಸಮಾನ ಹಕ್ಕು ನೀಡಿದೆ: ಸುಪ್ರೀಂ 

11:09 Nov 9 

 ಅಲಹಾಬಾದ್ ಕೋರ್ಟ್ ವಿವಾದಿತ ಭಾಗವನ್ನು ಮೂರು ಭಾಗ ಮಾಡಿದ್ದು ತಾರ್ಕಿಕವಲ್ಲ: ಸುಪ್ರೀಂಕೋರ್ಟ್

11:07 Nov 9 

 ಯಾತ್ರಿಗಳ ಅಭಿಪ್ರಾಯ ಮತ್ತು ಪುರಾತತ್ತ್ವ ಸಾಕ್ಷ್ಯ ಎಲ್ಲವೂ ಹಿಂದುಗಳ ಪರವಾಗಿದೆ: ಸುಪ್ರೀಂ ಕೋರ್ಟ್

11:07 Nov 9 

 ಮಸೀದು ಮುಖ್ಯ ಗುಂಬಜ್ ನ ಕೆಳಭಾಗದಲ್ಲಿ ಗರ್ಭಗುಡಿಯಿತ್ತು ಎಂದು ನಂಬಲಾಗುತ್ತಿದೆ: ಸುಪ್ರೀಂ ಕೋರ್ಟ್

11:07 Nov 9 

 ಮಸೀದಿಯ ಒಳಭಾಗದಲ್ಲಿ ಹಿಂದುಗಳು ಕೂಡ ಪೂಜೆ ಮಾಡುತ್ತಿದ್ದರು. ಆದರೆ ಬ್ರಿಟಿಷರು ಒಳಭಾಗವನ್ನು ಮುಸ್ಲಿಮರಿಗೆ, ಹೊರಭಾಗವನ್ನು ಹಿಂದುಗಳಿಗೆ ಎಂದು ಪ್ರತ್ಯೇಕಿಸಿದಾಗ ಹಿಂದುಗಳಿಗೆ ಪೂಜೆಯ ಅವಕಾಶ ಕೈತಪ್ಪಿತ್ತು: ಸುಪ್ರೀಂ

 11:07 Nov 9 

 1856 ರಿಂದ 1857 ರವರೆಗೆ ಅಲ್ಲಿ ನಮಾಜ್ ಮಾಡಲಾಗುತ್ತಿತ್ತು ಎಂಬುದಕ್ಕೂ ಯಾವುದೇ ಸಾಕ್ಷ್ಯವಿಲ್ಲ: ಸುಪ್ರೀಂ

 11:06 Nov 9 

 ಮಸೀದಿಯ ಕೆಳಗೆ ಇರುವ ಆಕೃತಿಗಳು ಹಿಂದು ಕಲಾಕೃತಿ ಎಂಬುದಕ್ಕೂ ಆಗುವುದಿಲ್ಲ: ಉಚ್ಛ ನ್ಯಾಯಾಲಯ

11:04 Nov 9 

 ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ನ್ಯಾಯಾಲಯ

11:01 Nov 9 

 ಮಸೀದಿಯ ಗುಂಬಜನ್ನು ರಾಮಜನ್ಮ ಭೂಮಿಯ ಸ್ಥಳ ಎಂದು ಜನರು ನಂಬುತ್ತಾರೆ. ಪುರಾಣಗಳಲ್ಲೂ ಸಹ ರಾಮಲಲ್ಲ ಬಗ್ಗೆ ಉಲ್ಲೇಖವಿದೆ. ಈ ಪ್ರದೇಶವನ್ನು ಹಿಂದೂಗಳ ಪರಿಕ್ರಮ ಮಾಡುತ್ತಿದ್ದರು. ನಂಬಿಕೆಯ ಆಧಾರದ ಮೇಲಲ್ಲ, ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತಿದೆ.

11:00 Nov 9 

 ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ, ಇದು ಇಸ್ಲಾಂ ರಚನೆಯಾಗಿರಲಿಲ್ಲ. ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವ ಅಂಶದ ಕುರಿತು ಖಚಿತತೆ ಇಲ್ಲ. ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ರಚನೆಯಾಗಿರಲಿಲ್ಲ. ರಾಮ ಅಯೋಧ್ಯೆಯಲ್ಲೇ ಹುಟ್ಟಿದ ಎಂಬ ಬಗ್ಗೆ ವಿವಾದವಿಲ್ಲ. ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿನ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ.

10:55 Nov 9 

ನಿರ್ಮೋಹಿ ಅಖಾಡದ ಅರ್ಜಿ ವಜಾ

ನಿರ್ಮೋಹಿ ಅಖಾಡದ ಅರ್ಜಿ ವಜಾ, ಶಿಯಾ ವಕ್ಫ್ ಬೋರ್ಡ್ ಕೂಡಾ ವಜಾ, ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಮಾನ್ಯತೆ. 

11:19 Nov 9ಅಯೋಧ್ಯೆ ಟ್ರಸ್ಟ್ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

11:18 Nov 9ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲಿಯೇ ಪ್ರತ್ಸೇಕ 5 ಎಕರೆ ಜಮೀನನ್ನು ಸರ್ಕಾರ ನೀಡಬೇಕು

11:17 Nov 9ವಿಶೇಷಾಧಿಕಾರ ಬಳಸಿ ಸುನ್ನಿ ವಕ್ಫ್ ಬೋರ್ಡ್ ಗೆ ಜಮೀನು ನೀಡಲು ಆದೇಶ

11:16 Nov 9ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ

11:07 Nov 9ವಿವಾದಿತ ಭೂಮಿಯನ್ನು ಮೂರು ಭಾಗ ಮಾಡಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ತಪ್ಪು-ಸುಪ್ರೀಂ ಕೋರ್ಟ್

11:05 Nov 9ಮುಸ್ಲಿಮರು ಮಸೀದಿಯನ್ನು ತ್ಯಜಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಭಗವಾನ್ ರಾಮನ ಜನ್ಮಸ್ಥಳವು ಮಸೀದಿಯ ಒಳ ಪ್ರಾಂಗಣದಲ್ಲಿದೆ ಎಂದು ಹಿಂದೂಗಳು ಯಾವಾಗಲೂ ನಂಬಿದ್ದರು. ಒಳ ಪ್ರಾಂಗಣದೊಳಗೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು ಮತ್ತು ಹಿಂದೂಗಳು ಹೊರಗಿನ ಅಂಗಳದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ

11:03 Nov 9ಹಿಂದೂ ಮತ್ತು ಮುಸ್ಲಿಮರು ಇಬ್ಬರೂ ಒಳ ಪ್ರಾಂಗಣದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಹೊರ ಅಂಗಳದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು: ಸಿಜೆಐ

11:02 Nov 9ಬಾಬರಿ ಮಸೀದಿಯನ್ನು ಮುಸ್ಲಿಮರು ಎಂದಿಗೂ ಕೈಬಿಡಲಿಲ್ಲ: ಎಸ್‌ಸಿ

10:58 Nov 9

ನಿರ್ಮೋಹಿ ಅಖಾಡಕ್ಕೆ ಪೂಜಾ ಅಧಿಕಾರವಿಲ್ಲ

 ನಿರ್ಮೋಹಿ ಅಖಾಡಕ್ಕೆ ಪೂಜಾ ಅಧಿಕಾರವಿಲ್ಲ. ಕಂದಾಯ ದಾಖಲೆ ಪ್ರಕಾರ ಇದು ವಿವಾದಿತ ಜಮೀನು ಸರ್ಕಾರಿ ಜಾಗವಾಗಿತ್ತು


Leave a Reply

Your email address will not be published. Required fields are marked *

error: Content is protected !!