“ಸುಭದ್ರೆ” ಸುಭದ್ರವಾಗಿದೆ ಆಡಳಿತಾಧಿಕಾರಿ ಪ್ರಹ್ಲಾದ್

ಉಡುಪಿ: ಸರಕಾರದ ಆದೇಶದಂತೆ ಶ್ರೀಕೃಷ್ಣ ಮಠದ ಆನೆಯನ್ನು ಸಂತೋನ್ಪತ್ತಿಗಾಗಿ ಹೊನ್ನಾವಳ್ಳಿಯ ಹೀರೆಕಲ್ಲು ಮಠದ ಅರಣ್ಯ ಪ್ರದೇಶಕ್ಕೆ ಬೀಡಲಾಗಿದೆಂದು ಮಠದ ಆಡಳಿತಾಧಿಕಾರಿ ಪಿ.ಆರ್.ಪ್ರಹ್ಲಾದ್ ಸ್ಪಷ್ಟನೆ ನೀಡಿದ್ದಾರೆ.
ಸರಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ವಿಭಾಗದ ಆದೇಶದಂತೆ ಮಠದ ಆನೆ ೨೬ ವರ್ಷವಾದರೂ ಗರ್ಭವತಿಯಾಗದ ಕಾರಣ ಹೀರೆಕಲ್ಲು ಅರಣ್ಯ ಪ್ರದೇಶಕ್ಕೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುವುದಕ್ಕಾಗಿ ಕಳುಹಿಸಿ ಕೋಡಲಾಗಿದೆಂದು ಮಠದ ಆಡಳಿತಾಧಿಕಾರಿ ಪಿ.ಆರ್.ಪ್ರಹ್ಲಾದ್ ಸ್ಪಷ್ಟಪಡಿಸಿದರು.


ಇಂದು ಮುಂಜಾನೆ ಬಡಗುಪೇಟೆಯ ಕನಕ ಮಹಲ್ ಕಟ್ಟಡದಲ್ಲಿ ಮಠದ ಆನೆ ಸುಭದ್ರೆಯನ್ನು ಸರಕಾರ ಆದೇಶದಂತೆ ಮುಂದಿನ ಗರ್ಭವತಿಯಾಗುವರೆಗೆ ಸುಮಾರು ೩೦ ಕೀ.ಮೀ.ದೂರ ಇರುವ ಶಿವಮೊಗ್ಗದ ಪಶು ವೈದ್ಯರು ನೋಡಿಕೊಳ್ಳಲು ಸುಲಭವಾಗುವಂತೆ ಕಳುಹಿಸಲಾಗಿದೆ. ದಾವಣಗೆರೆ ಅರಣ್ಯಧಿಕಾರಿ ರೇವಣ್ಣ ನೇತೃತ್ವದಲ್ಲಿ ಇಂದು ಮುಂಜಾನೆ ಲಾರಿಯಲ್ಲಿ ಹೀರೆಕಲ್ಲಿನ ಮಠಕ್ಕೆ ಕರೆದುಕೊಂಡು ಹೋಗಲಾಗಿದೆಂದು ಸ್ಪಷ್ಟಪಡಿಸಿದರು.


ಅಲ್ಲಿನ ೪೦ ಎಕ್ರೆ ಪ್ರದೇಶದಲ್ಲಿ ಕಬ್ಬು,ಭತ್ತ ಬೆಳೆಯಲಾಗಿದ್ದು ತುಂಗಾಭದ್ರ ನದಿ ಹರಿಯುವುದರಿಂದ ಆನೆಯ ಸಂತಾನೋತ್ಪತ್ತಿಗೆ ಸೂಕ್ತ ಸ್ಥಳವೆಂದು ಅರಣ್ಯಧಿಕಾರಿಗಳ ನಿರ್ದೆಶನದಂತೆ ಕಳುಹಿಸಿಕೊಡಲಾಗಿದೆ ಎಂದರು. ೨೬ ವರ್ಷವಾದ ಸುಭದ್ರೆ ಎರಡು ಬಾರಿಯಾದರೂ ಗರ್ಭ ಧರಿಸಬೇಕಾಗಿತ್ತು ಉಡುಪಿಯ ವಾತಾವರಣದಲ್ಲಿ ಆನೆಗೆ ಸೂಕ್ತವಲ್ಲದ ಕಾರಣ ಸರಕಾರದ ಆದೇಶದಂತೆ ಹೀರೆಕಲ್ಲು ಮಠಕ್ಕೆ ಕಳುಹಿಸಿದ್ದು ಸುಭದ್ರೆಯು ಶ್ರೀಕೃಷ್ಣ ಮಠದ ಆನೆಯಾಗಿರುತ್ತದೆ. ಮುಂದೆ ತನ್ನ ಮರಿಗಳೊಂದಿಗೆ ಉಡುಪಿಗೆ ಬರುವವಳಿದ್ದಾಳೆಂದು ಪ್ರಹ್ಲಾದ್ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!