ಲಾಕ್ ಡೌನ್ ಬಳಿಕ ಮುಂದೇನು: ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಪ್ರಶ್ನೆ
ನವದೆಹಲಿ: ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಎಷ್ಟು ಸಮಯದವರೆಗೆ ಲಾಕ್ ಡೌನ್ ಮುಂದುವರಿಸುತ್ತದೆ, ಲಾಕ್ ಡೌನ್ ನಿರ್ಣಯಕ್ಕೆ ಬಳಸುತ್ತಿರುವ ಮಾನದಂಡಗಳೇನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ನಾಯಕರ ಸಭೆಯಲ್ಲಿ ಅವರು ಮಾತನಾಡಿದ ಅವರು, ‘ಮೇ 17 ರ ನಂತರ, ಏನು? ಮತ್ತು ಹೇಗೆ? ಲಾಕ್‌ಡೌನ್ ಎಷ್ಟು ಸಮಯದವರೆಗೆ ಮುಂದುವರಿಯಬೇಕು ಎಂಬುದನ್ನು ನಿರ್ಣಯಿಸಲು ಸರ್ಕಾರ ಯಾವ ಮಾನದಂಡಗಳನ್ನು ಬಳಸುತ್ತಿದೆ ಎಂದು ಪ್ರಶ್ನಿಸಿದರು.
ನಮ್ಮ ರೈತರಿಗೆ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣಕ್ಕೆ, ಎಲ್ಲಾ ವಿಪರ್ಯಾಸಗಳ ನಡುವೆಯೂ ಬಂಪರ್ ಗೋಧಿ ಬೆಳೆಯಿಂದ ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಹೇಳಿದ ಸೋನಿಯಾ ಗಾಂಧಿ, ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ಜನರು ವಾಸ್ತವ ಸಂಗತಿ ಪರಿಗಣಿಸದೆ ಕೊರೋನಾ ವಿಷಯದಲ್ಲಿ ವಲಯಗಳ ವರ್ಗೀಕರಣವನ್ನು ನಿರ್ಧರಿಸುತ್ತಿದ್ದಾರೆ” ಎಂದು ಆರೋಪಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ನಾವು ಹತ್ತು ಸಾವಿರ ಕೋಟಿ ರೂ. ಪ್ಯಾಕೇಜ್ಗಾಗಿ ಪದೇಪದೆ ಪ್ರಧಾನಿಯವರಲ್ಲಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ಮುಖ್ಯಮಂತ್ರಿಗಳಲ್ಲದೆ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಿ ಚಿದಂಬರಂ, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ರಂದೀಪ್ ಸಿಂಗ್ ಸುರ್ಜೆವಾಲಾ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ರಂದೀಪ್ ಸಿಂಗ್ ಸುರ್ಜೆವಾಲಾ ಅವರು, ‘ರಾಜ್ಯಗಳು ಕೋವಿಡ್ 19 ಮತ್ತು ಲಾಕ್‌ಡೌನ್ ಅನ್ನು ಹೇಗೆ ನಿಭಾಯಿಸುತ್ತಿವೆ ಎಂಬುದನ್ನು ಪರಿಶೀಲಿಸಲು ಮತ್ತು ಅವರ ಅಗತ್ಯಗಳನ್ನು ನಿರ್ಣಯಿಸಲು ಕಾಂಗ್ರೆಸ್ ಅಧ್ಯಕ್ಷ ಸಭೆ ಹಮ್ಮಿಕೊಂಡಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಮನಮೋಹನ್ ಸಿಂಗ್, “ಸೋನಿಯಾ ಗಾಂಧಿಯವರು ಹೇಳಿದಂತೆ, ಲಾಕ್‌ಡೌನ್ 3.0 ನಂತರ ಏನಾಗುತ್ತದೆ ಎಂದು ನಾವು ತಿಳಿದುಕೊಳ್ಳಬೇಕು” ಎಂದು ಹೇಳಿದರು.