ಮದ್ಯ ಪ್ರಿಯರಿಗೆ ದೆಹಲಿ ಸರ್ಕಾರದ ಶಾಕ್: ಶೇ.70ರಷ್ಟು ಸುಂಕ ಏರಿಕೆ

ನವದೆಹಲಿ: ಸತತ 43 ದಿನಗಳ ಬಳಿಕ ಮದ್ಯದಂಗಡಿ ತೆರೆದಿದೆ ಎಂಬ ಖುಷಿಯ ನಡುವೆಯೇ ದೆಹಲಿ ಸರ್ಕಾರ ಪಾನಪ್ರಿಯರಿಗೆ ಶಾಕ್ ನೀಡಿದ್ದು, ಶೇ.70ರಷ್ಟು ಸುಂಕ ಹೇರಿದೆ

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ 43 ದಿನಗಳ ಬಳಿಕ ರಾಷ್ಟ್ರಾದ್ಯಂತ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೇ ಖುಷಿಯಲ್ಲಿ ಮದ್ಯ ಪ್ರಿಯರು ಸರತಿ ಸಾಲಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ನಿನ್ನೆಯಿಂದಲೇ ಮದ್ಯ ಮಾರಾಟ ಜೋರಾಗಿದೆ. ಈ ನಡುವೆ ದೆಹಲಿ ಸರ್ಕಾರ ಮದ್ಯದ ಮೇಲೆ ವಿಶೇಷ ಕೊರೋನಾ ತೆರಿಗೆ ವಿಧಿಸಿದ್ದು ಅದರಂತೆ ದೆಹಲಿಯಲ್ಲಿ ಮದ್ಯದ ದರಗಳಲ್ಲಿ ಶೇ.70ರಷ್ಟು ಏರಿಕೆಯಾಗಿದೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಕ್ರೋಢೀಕರಣ ಮತ್ತು ಮದ್ಯದ ಅಂಗಡಿಗಳ ಮುಂದೆ ಜನ ಜಂಗುಳಿಯನ್ನು ನಿಯಂತ್ರಿಸಲು ಮುಂದಾಗಿರುವ ದೆಹಲಿ ಸರ್ಕಾರ ಮದ್ಯದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ಮುಂದಾಗಿದೆ. ಇಂದಿನಿಂದ ಮದ್ಯದ ಮೇಲೆ ಶೇ.70ರಷ್ಟು ವಿಶೇಷ ಕೊರೋನಾ ಶುಲ್ಕ ವಿಧಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಿರ್ಧರಿಸಿದ್ದಾರೆ.

ನಿನ್ನೆ ದೆಹಲಿಯ 150 ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದ್ಯಪ್ರಿಯರು ದಿನವಿಡೀ ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿಸಿದ್ದರು. ಆದರೆ, ಈ ವೇಳೆ ಹಲವು ಕಡೆಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಯಡವಟ್ಟು ಮಾಡಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಮದ್ಯಪ್ರಿಯರ ಸಂಖ್ಯೆ ಕಡಿಮೆ ಮಾಡಬೇಕು ಎಂದು ಯೋಚಿಸಿರುವ ದೆಹಲಿ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. 

Leave a Reply

Your email address will not be published. Required fields are marked *

error: Content is protected !!