ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಸೋಲಾರ್ ಬೆಳಕು: ಸೆಲ್ಕೋ
ಉಡುಪಿ: ಪ್ರವಾಹಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಸೋಲಾರ್ ಬೆಳಕು ಮತ್ತು ಮೊಬೈಲ್ ಚಾರ್ಜ್ರ ಸೌಲಭ್ಯವನ್ನು ಉಚಿತವಾಗಿ ನೀಡಲು ಡಾ. ಹರೀಶ್ ಹಂದೆ ಅವರ ಸೆಲ್ಕೋ ಸೋಲಾರ್ ಸಂಸ್ಥೆ ನಿರ್ಧರಿಸಿದೆ.
ಪವಾಹಪೀಡಿತ ಪ್ರದೇಶಗಳಿಗೆ ಕಳುಹಿಸಲೆಂದು 250 ಸೋಲಾರ್ ಬೆಳಕು ವ್ಯವಸ್ಥೆ ಮತ್ತು ಮೊಬೈಲ್ ಚಾರ್ಜ್ರ ಗಳನ್ನು ಸಿದ್ದಪಡಿಸಲಾಗಿದೆ. ಹೆಚ್ಚಿನ ಬೇಡಿಕೆ ಬಂದಲ್ಲಿ, ಇನ್ನಷ್ಟು ಯುನಿಟ್ಗಳನ್ನು ಒದಗಿಸಲಾಗುತ್ತದೆ. ರಾಜ್ಯದ 48 ಶಾಖೆಗಳು ತಲಾ 2 ಪರಿಹಾರ ಕೇಂದ್ರಗಳಲ್ಲಿ ಸೌಲಭ್ಯ ಒದಗಿಸುವ, ಉಚಿತ ಸೌಲಭ್ಯ ಕುರಿತಂತೆ ಪ್ರವಾಹ ಪೀಡಿತ ಜಿಲ್ಲೆಗಳು ಜಿಲ್ಲಾಡಳಿತಕ್ಕೆ ತಿಳಿಸಲಾಗಿದ್ದು, ಅಲ್ಲಿಂದ ಮನವಿ ಬಂದ ತಕ್ಷಣ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆಯ ಸಿಇಒ ಮೋಹನ ಭಾಸ್ಕರ ಹೆಗಡೆ ತಿಳಿಸಿದ್ದಾರೆ.
ಒಂದು ಯೂನಿಟ್ 24 ಗಂಟೆಯೂ ಕಾರ್ಯನಿರ್ವಹಿಸಬಲ್ಲ ಟ್ಯೂಬ್ಲೈಟ್, ಏಕಕಾಲಕ್ಕೆ 10 ಮೊಬೈಲ್ಗಳನ್ನು ಚಾರ್ಜ್ ಮಾಡಬಹುದಾದ ಸಾಮರ್ಥ್ಯ ಹೊಂದಿದೆ. ಅಗತ್ಯವಿರುವ ಪರಿಹಾರ ಕೇಂದ್ರಗಳಲ್ಲಿ ಸೆಲ್ಕೋ
ಸಂಸ್ಥೆಯ ಒಬ್ಬ ಸಿಬ್ಬಂದಿ 24 ಗಂಟೆಯೂ ಸೌಲಭ್ಯ ಒದಗಿಸಲಿದ್ದಾರೆ.
ಸೋಲಾರ್ ಬೆಳಕಿನ ವ್ಯವಸ್ಥೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸೆಲ್ಕೋ ಇಂಡಿಯನ್ ಹಿರಿಯ ಅಧಿಕಾರಿ ಪಾರ್ಥಸಾರಥಿ 9880100668, ಮಹೇಶ್ 9731036038 ಅವರನ್ನು ಸಂಪರ್ಕಿಸಬಹುದು.