ತುಳು ನಿರ್ದೇಶಕ ಮುಹಮ್ಮದ್ ಹಾರಿಸ್ ಸಾವಿನ ಸುತ್ತ ಅನುಮಾನದ ಹುತ್ತ!

ಹಾರಿಸ್ ಸಾವು ಅಪಘಾತವೋ ಅಥವಾ ವ್ಯವಸ್ಥಿತ ಕೊಲೆಯೋ?
ಹಾರಿಸ್ ತಂದೆಯಿಂದ ಮಗನ ಸಾವು ಕೊಲೆಯಾಗಿರಬಹುದು ಎಂಬ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಕಳೆದ ಮಾರ್ಚ್ ತಿಂಗಳಲ್ಲಿ ಮೂಡಬಿದಿರೆಯ ಹೌದಲು ಎಂಬಲ್ಲಿ ರಾತ್ರಿ 11.30ರ ವೇಳೆಗೆ ಅಪಘಾತದಿಂದ ಮರಣ ಹೊಂದಿದ್ದಾರೆ ಏಂಬ ಪ್ರಕರಣವು ಇಂದು ಹಲವು ಅನುಮಾನಗಳು ಮೂಲಕ ಮತ್ತೆ ಸುದ್ದಿಯಾಗಿದೆ.

ತನ್ನ ಮಗನ ಸಾವಿನ ಬಗ್ಗೆ ಅನುಮಾನ ಇಂದು ಹಾರಿಸ್ ಅವರ ತಂದೆ ಮೂಡಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಡು ಬಡತನ ಕುಟುಂಬದ ಹಾರಿಸ್ ಆಟಿಡೊಂಜಿ ದಿನ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಸಿನಿಮಾ ಶೂಟಿಂಗ್ ಕೊನೆಯ ಹಂತ ತಲುಪಿತು. ಶಿರ್ತಾಡಿ ಯಲ್ಲಿ ಸಿನಿಮಾದ ಕೊನೆ ಪೈಟ್ ಶೂಟಿಂಗ್ ನಡೆಸಲಾಗುತ್ತಿತ್ತು. ಅಂದು ರಾತ್ರಿ 11 ಘಂಟೆಗೆ ಮನೆಗೆ ಬಂದಿದ್ದ ಹಾರಿಸ್ ಅವರಿಗೆ 11.20 ಕ್ಕೆ. ಒಂದು ಕರೆ ಬರುತ್ತದೆ ಕರೆ ಮಾಡಿದವರು ತಕ್ಷಣ ಶಿರ್ತಾಡಿ ಬರುವಂತೆ ಹೇಳುತ್ತಾರೆ. ಕರೆಗೆ ಸ್ಪಂದಿಸಿ ರಾತ್ರಿ 11.30 ಕ್ಕೆ ಹಾರಿಸ್ ಮನೆಯಿಂದ ಹೊರಡುತ್ತಾನೆ.

ಹೇಗೆ ಮನೆಯಿಂದ ಹೊರಟ ಹಾರಿಸ್ ಅಪಘಾತದಲ್ಲಿ ಮರಣ ಹೊಂದಿದರು ಎಂಬ ಸುದ್ದಿ ಮನೆಯವರಿಗೆ ಸಿಗುತ್ತದೆ. ಈ ಕರೆ ಮಾಡಿ ದವರು ಶೂಟಿಂಗ್ ಮುಗಿದು ಮನೆಗೆ ಹೋಗಿದ್ದ ಹಾರಿಸ್ ರನ್ನು ಯಾಕಾಗಿ ರಾತ್ರಿ ಬರುವಂತೆ ಹೇಳಿದರು.? ಇಲ್ಲಿ ಕರೆ ಮಾಡಿದ ವ್ಯಕ್ತಿ ಯಾರು? ಹಾರಿಸ್ ಉಪಯೋಗಿಸುತ್ತಿದ್ದ ಮೊಬೈಲ್ ಮನೆಯವರಿಗೆ ಕೊಟ್ಟಿಲ್ಲ ಏಕೆ? ಮನೆಯಿಂದ ಹೊರಟ ಹಾರಿಸ್ ರಸ್ತೆಯ ಬಳಿ ಬದಿಯ (ಶಿರ್ತಾಡಿ ಹೋಗುವಾಗ ಹಾರಿಸ್ ಗೆ ರಾಂಗ್ ಸೈಡ್) ಮರಕ್ಕೆ ಒಮ್ಮೆ ಕಾರು ಡಿಕ್ಕಿ ಹೊಡೆದಿದೆ, ಹೀಗೆ ರಸ್ತೆ ಬಲ ಬದಿಗೆ ಹೋಗಿ ಡಿಕ್ಕಿ ಹೊಡೆಯಲು ಹೇಗೆ ಸಾಧ್ಯ? ಅಪಘಾತ ನಡೆದ ಮೃತಪಟ್ಟಿದ್ದರೆ ಆ ರಾತ್ರಿಯೇ ಕಾರನ್ನು ಶಿಫ್ಟ್ ಮಾಡಿದ್ದು ಏಕೆ? ಅಪಘಾತ ನಡೆದುದನ್ನು ಮೊದಲು ಮಾಡಿದವರು ಯಾರು? ಹಾರಿಸ್ ರನ್ನು ಆಸ್ಪತ್ರೆಗೆ ಕೊಂಡುಹೋದವರು ಯಾರು? ಆಂಬುಲೆನ್ಸ್‌ಗೆ ಕರೆ ಮಾಡಿದವರು ಯಾರು? ಹಾರಿಸ್ ಅವರ ಮೊಬೈಲ್ ಅನ್ನು ಚಿತ್ರ ತಂಡದವರಿಗೆ ಪೋಲೀಸರಿಗೆ ಅಥವಾ ಮನೆಯವರಿಗೆ ಹಿಂತಿರುಗಿಸಿಲ್ಲ?

ಕಾರು ಮರಕ್ಕೆ ಗುದ್ದಿದರೆ ಕಾರು ನಜ್ಜುಗುಜ್ಜು ಸ್ಥಿತಿ ನೋಡುವಾಗ ಅಪಘಾತದ ಭೀಕರತೆ ಪ್ರಮಾಣದಲ್ಲಿ ಮರದಲ್ಲಿ ಅಪಘಾತದ ಕುರುಹುಗಳು ಕಂಡು ಬಂದಿಲ್ಲ. ಹೀಗೆ ಪ್ರಕರಣದಲ್ಲಿ ಹಲವಾರು ಅನುಮಾನಗಳಿದ್ದು ಈ ಬಗ್ಗೆ ಸಮಗ್ರ ತನಿಖೆ ಅವಶ್ಯಕತೆ ಇದೆ. ಹಲವಾರು ಕನಸುಗಳನ್ನು ಹೊತ್ತು ಕೊಂಡಿದ್ದ ಹಾರಿಸ್ ತನ್ನ ಮೊದಲ ಸಿನಿಮಾದಲ್ಲಿ ಬಂದ ಹಣದಲ್ಲಿ ತನ್ನಿಬ್ಬರು ಸಹೋದರಿಯರ ವಿವಾಹ ಮಾಡಿಸಬೇಕು ಎಂದುಕೊಂಡಿದ್ದ.
ಆದರೆ ಆ ಎಲ್ಲಾ ಕನಸುಗಳನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ ಹರೀಶ್. ಹರೀಶ್ ಅವರಿಗೆ ನಿಜವಾಗಿಯೂ ಅನ್ಯಾಯ ಆಗಿದ್ದರೆ ಅ ಬಗ್ಗೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಬೇಕು. ಈ ಬಗ್ಗೆ ಹಾರಿಸ್ ಅವರ ತಂದೆ ಏಕಾಂಗಿಯಾಗಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ಇವರೊಂದಿಗೆ ಹಾರಿಸ್ ನ ಸ್ನೇಹಿತರು ಹಿತೈಷಿಗಳು ಹೋರಾಟಕ್ಕಿಳಿದಿದ್ದಾರೆ .

Leave a Reply

Your email address will not be published. Required fields are marked *

error: Content is protected !!