ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ
ಉಡುಪಿ : ಜನನಾಯಕ ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರ ಶ್ರದ್ಧಾಂಜಲಿ ಸಭೆಯು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಭವನ ಉಡುಪಿಯಲ್ಲಿ ನಡೆಯಿತು.
ಕೆಪಿಸಿಸಿ ಕಾರ್‍ಯದರ್ಶಿ ಎಂ.ಎ ಗಫುರ್ ಶ್ರದ್ಧಾಂಜಲಿ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಗೋಪಾಲ ಭಂಡಾರಿಯವರ ಅಂತಿಮ ಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲೀಂ ಮಹಿಳೆಯರು ಕೂಡ ಭಾಗವಹಿಸಿ ಅಂತಿಮ ಯಾತ್ರೆಯನ್ನು ಕಂಡು ಕಣ್ನೀರಿಟ್ಟಿದ್ದಾರೆ. ಗೋಪಾಲ ಭಂಡಾರಿಯವರು ಬಡವರಿಗೆ, ದುರ್ಬಲರಿಗೆ , ದಲಿತರಿಗೆ ಅತ್ಯತ್ತಮ ಸೇವೆ ಕೊಟ್ಟ ಜನನಾಯಕ. ಪಕ್ಷದ ಒಳಿತಿಗಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಮತ್ತೆ ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯವರೆಗೂ ಸಂಬಂಧವನ್ನು ಹೊಂದಿದ್ದರು ಎಂದರು.
ಇನ್ನೂ ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಒಬ್ಬ ಧೀಮಂತ ನಾಯಕ ಉತ್ತಮ ಸ್ಥಾನವನ್ನ ತಲುಪಿ ನಮ್ಮನ್ನ ಅಗಲಿದ್ದಾರೆ. ನಿನ್ನೆ ನಡೆದ ಅಂತಿಮಯಾತ್ರೆಯ ಮೆರವಣಿಗೆಯಲ್ಲಿ ಅಭಿಮಾನಿಗಳ ಜನಸ್ತೋಮದಿಂದಲೇ ಅವರ ಮೇಲಿರುವ ಆದರ್ಶ, ಪ್ರೀತಿ, ವಿಶ್ವಾಸನ್ನು ಕಾಣಬಹುದು. ಪಕ್ಷಭೇದ ಮರೆತು ಅವರ ಶ್ರದ್ದಾಂಜಲಿ ಸಭೆಯಲ್ಲಿ ಎಲ್ಲರು ಭಾಹವಹಿಸಿದ್ದರು ಎಂದರು. ಗ್ರಾಮ ಪಂಚಾಯತ್ ಸದಸ್ಯ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ,ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಶಾಸಕರಾಗಿ ರಾಜ್ಯ ಕಾಂಗ್ರೆಸ್ಸಿನ ಪ್ರಧಾನ ಕಾರ್‍ಯದರ್ಶಿಯಾಗಿ ಉತ್ತಮ ಸೇವೆ ನೀಡಿದವರು.
ಇಂತಹ ಸಂಧರ್ಭದಲ್ಲಿ ಪ್ರಾಮಾಣಿಕ ವ್ಯಕ್ತಿಯನ್ನು ಕಳೆದು ಕೊಂಡಿರುವುದು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಕೆಲ ದಿನದ ಹಿಂದೆ ಅವರನ್ನು ಭೇಟಿಯಾದಾಗ ಸ್ಥಳೀಯ ಸಮಸ್ಯೆಗಳು, ಪಕ್ಷವನ್ನು ಹೇಗೆ ಕಟ್ಟಬೇಕು, ನಾಯಕರ ಸಭೆ ಕರೆಸಿ, ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು ಎಂಬ ವಿಚಾರ ವಿನಿಮಯ ಮಾಡಬೇಕು, ಕೋರ್ ಕಮಿಟಿಯ ಮೀಟಿಂಗ್ ಮಾಡ್ಬೇಕು, ಪಕ್ಷಕ್ಕಾಗಿ ನೀವು ಕರೆದಾಗ ಜಿಲ್ಲೆಯ ಯಾವುದೇ ಮೂಲೆಯಲ್ಲೂ ನಾನು ಭಾಗವಹಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದರು ಎಂದರು.
ಇನ್ನೂ ಶ್ರದ್ಧಾಂಜಲಿ ಸಭೆಯಲ್ಲಿ ವೆರೋನಿಕಾ ಕರ್ನೇಲಿಯೋ, ಡಾಕ್ಟರ್ ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ಶ್ಯಾಮಲ ಭಂಡಾರಿ, ಹರೀಶ್ ಕಿಣಿ, ಸತೀಶ ಅಮೀನ್ ಪಡುಕೆರೆ, ಮೀನಾಕ್ಷಿ ಮಾಧವ ಬನ್ನಂಜೆ, ಭುಜಂಗ ಶೆಟ್ಟಿ, ಯಶಿಧರ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಸುಧಾಕರ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ,ಕೇಶವ ಕುಂದರ್ ,ನರಸಿಂಹ ಮೂರ್ತಿ, ರಿಯಾಜ್ ಪಳ್ಳಿ, ಕಿರಣ್ ಕುಮಾರ್ ಮತ್ತಿತರರು ಭಾಗವಹಿಸಿ ಮೃತರ ಆತ್ಮಕ್ಕೆ ಚಿರ ಶಾಂತಿ ಕೋರಿದರು.