“ವ್ಯಕ್ತಿ ವಿಕಸನ ಕಾರ್ಯಗಾರ”

ಉಡುಪಿ: ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರವು ಉತ್ತಮ ಬಾಂಧವ್ಯ ಇಲ್ಲಿನ ಜನರೊಂದಿಗಿದ್ದು ಉಳಿತಾಯ ಮನೋಭಾವವನ್ನು ಹೆಚ್ಚಿಸುವಂತೆ ಮಾಡಿದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಕಾನೂನುಗಳು ಜನರಿಗೆ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ ಅತಿಯಾದ ಸಮಸ್ಯೆಯನ್ನು ನೀಡುತ್ತದೆ ಎಂದು ಸಹಕಾರಿ ಯೂನಿಯನ್ನ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಹೇಳಿದರು.

ಜೋಡುಕಟ್ಟೆಯ ಡಯಾನ ಹೋಟೆಲ್‌ನಲ್ಲಿ ನಡೆದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಹಾಗೂ ಫಾರ್ಚೂನ್ ಇನ್ಫೋಸರ್ವ್ ವತಿಯಿಂದ ಜಿಲ್ಲೆಯ ಸಹಕಾರಿ ಸಿಬ್ಬಂದಿಗಳಿಗೆ ಒಂದು ದಿನದ “ವ್ಯಕ್ತಿ ವಿಕಸನ ಕಾರ್ಯಗಾರ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಇಂದಿನ ತಂತ್ರಜ್ಞಾನ ಯುಗದಲ್ಲಿ ಸಹಕಾರಿ ಕ್ಷೇತ್ರದ ಸಿಬ್ಬಂದಿಗಳು ಯಾವ ವಿಚಾರ ಕೇಳಿದರು ಕ್ಷಣಾರ್ಧದಲ್ಲಿ ಅದನ್ನು ಹಿರಿಯ ಅಧಿಕಾರಿಗಳಿಗೆ ನೀಡುವ ಕಾರ್ಯ ಸಹಕಾರಿ ಕ್ಷೇತ್ರದಲ್ಲಿ ಸಿಬ್ಬಂದಿಗಳು ತಮ್ಮ ಬದ್ಧತೆಯನ್ನು ತೋರಿಸಲು ಸಹಕಾರಿಯಾಗುತ್ತದೆ ಎಂದರು. ಸರಕಾರದಿಂದ ಬರುವ ಸುತ್ತೋಲೆಗಳು ಸರಿಯಾಗಿ ಪರಾಮರ್ಶಿಸಿ ಅದರಂತೆ ಜನರಿಗೆ ಮನವರಿಕೆ ಮಾಡಿ ಸಹಕಾರಿ ಕ್ಷೇತ್ರ ಬೆಳೆಯುವಲ್ಲಿ ಸಿಬ್ಬಂದಿಗಳ ಪಾತ್ರ ಹೆಚ್ಚಾಗಿರುತ್ತದೆ .

ಕಾರ್‍ಯಕ್ರಮದಲ್ಲಿ ಫಾರ್ಚುನ್ ಇನ್ಫೋಸರ್ವ್ ವ್ಯವಸ್ಥಾಪಕ ಪ್ರವೀಣ್ ಬಂಗೋಡಿ, ವಿಶ್ವ ಬೆಳಕು ಸೌಹಾರ್ದ ಸಹಕಾರಿ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್,  ಪ್ರಣವ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಆರ್ ಪ್ರಸಾದ್,  ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷರಾದ ಬಿ ಮಧುಸೂದನ್ ನಾಯಕ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ ಪ್ರಭು ಉಪಸ್ಥಿತರಿದ್ದರು.s

Leave a Reply

Your email address will not be published. Required fields are marked *

error: Content is protected !!