ರಸ್ತೆಗಳ ಅಭಿವೃದ್ಧಿ ಕುರಿತು ನಿತಿನ್ ಗಡ್ಕರಿ ಗೆ ಮನವಿ ಸಲ್ಲಿಸಿದ ಶೋಭಾ ಕರಂದ್ಲಾಜೆ

ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಕು.ಶೋಭಾ ಕರಂದ್ಲಾಜೆ ಅವರು ಭೇಟಿ ಮಾಡಿ, ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಾದು ಹೋಗುವ ಕೆಲವು ರಸ್ತೆಗಳ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು.

ಸಮಸ್ಯೆಗಳು ಈ ಕೆಳಗಿನಂತಿವೆ:

1. ಕರಾವಳಿ ಬೈಪಾಸ್-ಮಲ್ಪೆ ರಸ್ತೆ ಅಗಲೀಕರಣ. 2.ಪರ್ಕಳದಿಂದ-ತೀರ್ಥಹಳ್ಳಿಯ ವರೆಗೆ NH ಅಭಿವೃದ್ಧಿ. 3.ಬೇಲೂರು-ಚಿಕ್ಕಮಗಳೂರು ರಸ್ತೆ ಅಭಿವೃದ್ಧಿ. 4.ಶೃಂಗೇರಿ-ಬಾಳೆಹೊನ್ನೂರು-ಅಲ್ದೂರು-ನಾಡಿಪುರ ರಸ್ತೆ ಅಭಿವೃದ್ಧಿ. 5. ತೀರ್ಥಹಳ್ಳಿಯಿಂದ- ನಿಮ್ಮಾರದವರೆಗೆ ರಸ್ತೆ ಅಭಿವೃದ್ಧಿ. 6.ಬೇಲೂರು-ಚಿಕ್ಕಮಗಳೂರು (ಮೂಡಿಗೆರೆ-ಕಡೂರು ರಸ್ತೆ) ನಗರಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ. ಹಾಗೂ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಇನ್ನಿತರ ಸಮಸ್ಯೆಗಳ ಕುರಿತು ಮಾನ್ಯ ಕೇಂದ್ರ ಸಚಿವರ ಗಮನಕ್ಕೆ ತಂದು, ರಾಷ್ಟ್ರೀಯ ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!