ಶಿರ್ವ: ಸಂತ ಮೇರಿ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ , ವಿದ್ಯಾರ್ಥಿ ವೇತನ ವಿತರಣೆ 

ಪ್ರತಿಷ್ಠಿತ ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಸಂತ ಮೇರಿ ಅಲುಮ್ನಿ ಅಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆ ಶಿರ್ವ ಶ್ಯಾಮ್ ಸ್ಕ್ವಾರ್ ಸಭಾಂಗಣದಲ್ಲಿ ಅಲುಮ್ನಿ ಅಧ್ಯಕ್ಷ ಕೆಆರ್ ಪಾಟ್ಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಳೆದ ವರ್ಷದ ವರದಿಯನ್ನು ಕಾರ್ಯದರ್ಶಿ ಡೇನಿಸ್ ಮತಯಸ್ ಸಭೆಯಲ್ಲಿ ವಾಚಿಸಿದರು. ಆಯವ್ಯಯ ವರದಿಯನ್ನು ಕೋಶಾಧಿಕಾರಿ ಸೈಮನ್ ಡಿಸೋಜಾ ಮಂಡಿಸಿ ,ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಸದಸ್ಯರನ್ನು ಪರಿಚಯಿಸಿದ  ಮತಯಸ್ ಲೋಬೋ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಐರಿನ್ ಮೆಂಡೋನ್ಸಾ ರವರು ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
2019-20 ನೆ ಸಾಲಿನ ಅಧ್ಯಕ್ಷರಾಗಿ ಡಾ. ಗುರುರಾಜ್ ಕೆ, ಕಾರ್ಯದರ್ಶಿಯಾಗಿ ಕೆ.ಆರ್ ಪಾಟ್ಕರ್, ಕೋಶಾಧಿಕಾರಿ ಸೈಮನ್ ಡಿಸೋಜಾ ರವರನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ವಾರ್ಷಿಕ ಮಹಾಸಭೆಯಲ್ಲಿ ಹಳೆ ವಿದ್ಯಾರ್ಥಿ ಅಲ್ಫೋನ್ಸಸ್ ಕೊರ್ಡ ರವರು ಪ್ರಾಯೋಜಿಸಿದ ವಿದ್ಯಾರ್ಥಿ ವೇತನವನ್ನು ವೃತಿ ಶಿಕ್ಷಣ ಪಡೆಯುತ್ತಿರುವ ಮೂವರು ವಿದ್ಯಾರ್ಥಿಗಳಿಗೆ ತಲಾ 20,000/- ದಂತೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಆರ್ ಪಾಟ್ಕರ್ ವಿತರಿಸಿ ಶುಭ ಹಾರೈಸಿದರು.
ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಡಾ ಗುರುರಾಜ್ ಕೆ ಸರ್ವರ ಸಹಕಾರ ಯಾಚಿಸಿದರು. ಕೆ.ಆರ್ ಪಾಟ್ಕರ್ ಸ್ವಾಗತಿಸಿ ವಂದಿಸಿದರು. ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!