ಶಿರ್ವ: ಸಹಾಯಕ ಧರ್ಮಗುರು ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ
ಉಡುಪಿ : ಶಿರ್ವ ದೇವಾಲಯದ ಸಹಾಯಕ ಧರ್ಮಗುರು ಮತ್ತು ಡಾನ್ ಬಾಸ್ಕೋ ಶಾಲೆಯ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಫಾ. ಮಹೇಶ್ ಡಿಸೋಜಾ (36)ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉಡುಪಿ ಧರ್ಮಪ್ರಾಂತ್ಯ ಘೋಷಣೆಯಾದ ಬಳಿಕ ಉಡುಪಿ ಧರ್ಮ ಪ್ರಾಂತ್ಯದ ಪ್ರಪ್ರಥಮ ಧರ್ಮಗುರುಗಳಾಗಿ ದೀಕ್ಷೆಯನ್ನು ಸ್ವೀಕರಿಸಿದ ಮೂಲತಃ ಮೂಡುಬೆಳ್ಳೆ ಪರಿಸರ ದವರಾಗಿದ್ದು, ವಿದ್ಯಾರ್ಥಿಗಳ ಮತ್ತು ಹೆತ್ತವರ ಪ್ರೀತಿಗೆ ಪಾತ್ರರಾಗಿದ್ದರು. 2013 ರಲ್ಲಿ ಧರ್ಮಗುರುಗಳಾಗಿ ದೀಕ್ಷೆಯನ್ನು ಸ್ವೀಕರಿಸಿದ ಬಳಿಕ ಮಿಲಾಗ್ರಿಸ್ ಮತ್ತು ಮೌಂಟ್ ರೋಸರಿ ಕಲ್ಯಾಣಪುರ ದೇವಾಲಯದಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಶಿರ್ವ ದೇವಾಲಯಕ್ಕೆ ವರ್ಗಾವಣೆಗೊಂಡಿದ್ದರು.
ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
It’s very sad & shocking news… May his soul rest in peace..
Eternal rest grant unto him O Lord and let perpetual light shine upon him may his soul rest in peace Amen.