ಶಿರೂರು ಮೂಲ ಮಠದಲ್ಲಿ ಪ್ರತ್ಯಕ್ಷವಾದ ಶಿರೂರು ಶ್ರೀಗಳ ಬೃಂದಾವನ
ಉಡುಪಿ:ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರು ನಿಧನವಾಗಿ ವರ್ಷ ಕಳೆದ ನಂತರ ಕಡೆಗೂ ಶಿರೂರು ಮೂಲ ಮಠದಲ್ಲಿ ಶ್ರೀಗಳ ಬೃಂದಾವನ ನಿರ್ಮಿಸಲು ಸಜ್ಜಾಗಿದೆ.
ಜುಲೈ 19 ಅವರು ನಿಧಾನರಾಗಿ ಒಂದು ವರ್ಷವಾಗಿತ್ತು, ಅವರ ಭಕ್ತರು ಬೃಂದಾವನ ನಿರ್ಮಿಸದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.ಮಾತ್ರವಲ್ಲದೆ ಈ ಬಗ್ಗೆ ಕಾನೂನು ಹೋರಾಟ ಮಾಡಲು ಚಿಂತನೆ ನಡೆಸಿರುವುದಾಗಿ ಉಪ್ಪೂರಿನಲ್ಲಿ ಶ್ರೀಗಳ ಪ್ರಥಮ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹೇಳಿದ್ದರು.
ಇದೀಗ ಬೃಂದಾವನವನ್ನು ನಿರ್ಮಿಸಲು ಶಿರೂರು ಮಠದ ಧ್ವಂದ್ವ ಮಠವಾದ ಸೋದೆಮಠವು ಮುಂದಾಗಿದೆ.
ಶನಿವಾರ ಬೆಳಿಗ್ಗೆ ಶಿರೂರು ಮೂಲ ಮಠದಲ್ಲಿ ಬೃಂದಾವನ ನಿರ್ಮಿಸಲು ಬೇಕಾದ ತುಳಸಿಕಟ್ಟೆ ತಂದು ಇಡಲಾಗಿದೆ. ಅಭಿಮಾನಿ ಬಳಗವೂ ಅವರ ಬೃಂದಾವನ ನಿರ್ಮಿಸಲು ಹೊರಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಇದು ನಮ್ಮ ಹೋರಾಟಕ್ಕೆ ಸಂದ ಜಯವೆನ್ನುತ್ತಿದ್ದಾರೆ.