ಭೂಗತ ನಂಟು: ಶಿಲ್ಪಾ ಶೆಟ್ಟಿ ದಂಪತಿಗಳಿಗೆ ಇಡಿ ಸಮನ್ಸ್
ಮುಂಬೈ: ಭೂಗತ ಜಗತ್ತಿನೊಂದಿಗೆ ಆರ್ಥಿಕ ಅವ್ಯವಹಾರ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಜಾರಿ ನಿರ್ದೇಶನಾಲಯ ಸೆಲೆಬ್ರೆಇಟಿ ದಂಪತಿಗಳಾದ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾಗೆ ಸಮನ್ಸ್ ಜಾರಿ ಮಾಡಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತನಾಗಿರುವ ಇಕ್ಬಾಲ್ ಮಿರ್ಚಿಯ ಜತೆ ಆರ್ಥಿಕ ಅವ್ಯವಹಾರ ನಡೆಸಿದ ಆರೋಪ ಇವರ ಮೇಲಿದೆ. ಬರುವ ನವೆಂಬರ್ 4ರಂದು ಮುಂಬೈನಲ್ಲಿನ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಶಿಲ್ಪಾ ಶೆಟ್ಟಿ-ಕುಂದ್ರಾ ದಂಪತಿಗಳಿಗೆ ಸೂಚಿಸಲಾಗಿದೆ.
ದಾವೂದ್ ಗ್ಯಾಂಗ್ ನ ಇಕ್ಬಾಲ್ ಜತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಉದ್ಯಮಿ ರಾಜ್ ಕುಂದ್ರಾ ಅವರ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದ ಲ್ಲದೆ ಐಪಿಎಲ್ ಮ್ಯಾಚ್ ಫಿಕ್ಸಿಂಗ್, ಬಿಟ್ ಕಾಯಿನ್ ಅವ್ಯವಹಾರಗಳಲ್ಲಿ ಸಹ ಈ ದಂಪತಿಗಳ ಹೆಸರಿದೆ.
ಇತ್ತೀಚಿನ ದಿನದಲ್ಲಿ ಇಡಿ ಇಕ್ಬಾಲ್ ಆಪ್ತ ಹುಮಾಯೂನ್ ಮರ್ಚೆಂಟ್ ಅನ್ನು ಇದೇ ವಿಚಾರದಲ್ಲಿ ಬಂಧಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಬೆಂಗಳೂರು ಮೂಲದ ರಿಂಕು ದೇಶಪಾಂಡೆ ಎಂಬ ಮಹಿಳೆಯನ್ನು ಸಹ ಹಣ ವರ್ಗಾವಣೆ ಪ್ರಕರಣದಡಿ ಬಂಧಿಸಿ ವಿಚಾರಣೆ ನಡೆಸಿದೆ