ಮಂಗಳೂರು ನಗರ ರೋಟರ್‍ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶೆಲ್ಡನ್ ಕ್ರಾಸ್ತಾ

ಮಂಗಳೂರು- “ಲಯನ್ಸ್ ಹಾಗೂ ರೋಟರ್‍ಯಾಕ್ಟ್ ಕ್ಲಬ್‌ಗಳು ಸಮಾಜದ ಆಗುಹೋಗುಗಳಿಗೆ, ಅಗತ್ಯತೆಗಳಿಗೆ ಸದಾ ಸ್ಪಂದಿಸುವ, ನೊಂದವರ ಕಣ್ಣೀರು ಒರೆಸುವ ಎರಡು ಬಲಿಷ್ಟ ಬಾಹುಗಳಿದ್ದಂತೆ. ಆಯ್ಕೆಗೊಂಡ ಹೊಸ ಸಮಿತಿ ಈ ಆಶಯಗಳಿಗೆ ಸ್ಪಂದಿಸಲಿ”ಎಂದು ಲಯನ್ಸ್ 317 ಡಿ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್ ಹೇಳಿದರು. ಅವರು ಮಂಗಳೂರು ನಗರ ರೋಟರ್‍ಯಾಕ್ಟ್ ಕ್ಲಬ್ ಇದರ 2019-20 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಂತೂರಿನ ಈಡನ್ ಕ್ಲಬ್‌ನಲ್ಲಿ ಜುಲಾಯ್ 30 ರಂದು ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ರೋಟರ್‍ಯಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ, ಯುವ ಉದ್ಯಮಿ ಶೆಲ್ಡನ್ ಕ್ರಾಸ್ತಾ ಹಾಗೂ ಕಾರ್ಯದರ್ಶಿಯಾಗಿ ರಕ್ಷತಾ ಹುದ್ದೆ ಸ್ವೀಕರಿಸಿದರು. ರೋಟರಿ ಕ್ಲಬ್ ಮಂಗಳೂರು ಕೇಂದ್ರದ ಅಧ್ಯಕ್ಷ ಡಾ. ಜಯಪ್ರಕಾಶ್ ಪೂಂಜಾ ಪದಗ್ರಹಣ ನೆರವೇರಿಸಿದರು. ನಿರ್ಗಮಿತ ಅಧ್ಯಕ್ಷ ಡಾ. ಗಣೇಶ್ ಜಿಟಿ ಇವರನ್ನು ಕಳೆದ ಸಾಲಿನಲ್ಲಿ ಮಾಡಿದ ಸಮಾಜಮುಖಿ ಸೇವೆಗಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರೋಟರಿ ಮುಖಂಡರಾದ ಕೇಶವ ಆರ್. ಹಾಗೂ ಡಾ. ದೇವದಾಸ ರೈ ಉಪಸ್ಥಿತರಿದ್ದರು. ಹದಿನೈದು ಮಂದಿ ನೂತನ ಸದಸ್ಯರನ್ನು ಸ್ವಾಗತಿಸಲಾಯಿತು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

1 thought on “ಮಂಗಳೂರು ನಗರ ರೋಟರ್‍ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶೆಲ್ಡನ್ ಕ್ರಾಸ್ತಾ

Leave a Reply to Rtn Michael Mathias Shirva Rotary Cancel reply

Your email address will not be published. Required fields are marked *

error: Content is protected !!