ಹಿರಿಯ ಸಾಹಿತಿ ಏರ್ಯಲಕ್ಷೀನಾರಾಯಣ ಆಳ್ವ ಇನ್ನಿಲ್ಲ
ಬಂಟ್ವಾಳ: ಹಿರಿಯ ಸಾಹಿತಿ ಏರ್ಯಲಕ್ಷೀನಾರಾಯಣ ಆಳ್ವ(94)ಅವರು ಹೃದಯಘಾತದಿಂದ ಇಂದು ಸಂಜೆ ಏರ್ಯಬೀಡು ಅವರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಅಂಕಣಕಾರರಾಗಿ, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ,ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯಾಗಿ , ಸಾಹಿತ್ಯ ದಲ್ಲಿ ವಿಶೇಷ ಸಾಧನೆಗೈದ ಹಿರಿಯ ಚೇತನ ಲಕ್ಷೀನಾರಾಯಣ ಆಳ್ವ ಅವರು ಆರೋಗ್ಯವಾಗಿಯೇ ಇದ್ದರು. ಸಂಜೆಯ ವೇಳೆ ಅವರು ಮನೆಯಲ್ಲಿ ಯೇ ಹೃದಯಾಘಾತದಿಂದ ನಿಧನರಾದರು ಎಂದು ಅವರು ಸಂಬಂಧಿಕರು ತಿಳಿಸಿದ್ದಾರೆ.
ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ನಿಕಟವರ್ತಿ ಯಾಗಿ ಅಲ್ಲಿನ ಎಲ್ಲಾ ಕಾರ್ಯಕ್ರಮ ಗಳಲ್ಲಿ ಇವರು ಭಾಗಿಯಾಗುತ್ತಿದ್ದರು. ಬಂಟ್ವಾಳ ದಲ್ಲಿ ಏರ್ಯಲಕ್ಮೀನಾರಾಯಣ ಅಳ್ವ ಅವರ ನೇತ್ರತ್ವದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಗಳಲ್ಲಿ ಹೆಗ್ಗಡೆ ಯವರು ಪಾಲ್ಗೊಳ್ಳುತ್ತಿದ್ದರು.ಏರ್ಯ ಅವರು ಪತ್ನಿ ಹಾಗೂ ಮಗಳು ಅಳಿಯ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗಣ್ಯರ ಸಂತಾಪ: ಹಿರಿಯ ಸಾಹಿತಿ ಏರ್ಯರ ಕೃತಿ ಜೀವನ ಎರಡು ಒಂದೇ ಅಗಿತ್ತು, ಇವರ ಅಗಲುವಿಕೆ ಜಿಲ್ಲೆಗೆ ದೊಡ್ಡ ನಷ್ಟವಾಗಿದೆ, ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿ ದವರು ಇವರು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್.ಎಸ್.ಎಸ್.ಪ್ರಮುಖ ಡಾ! ಪ್ರಭಾಕರ್ ಭಟ್, ಮಾಜಿ ಸಚಿವ ರಮಾನಾಥ ರೈ , ಕಲಾವಿದ ಮಂಜುವಿಟ್ಲ, ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ