ಸೈನಿಕರಿಗೆ ಕನಿಷ್ಠ ಗೌರವ ತೋರಿದರೂ,ಬಹುದೊಡ್ಡ ನೈತಿಕ ಬೆಂಬಲವಾಗುತ್ತದೆ

 ಉಡುಪಿ: ಸೈನಿಕರಿಗೆ ನಾಗರೀಕರು ಕನಿಷ್ಠ ಗೌರವ ತೋರಿದರೂ ಅದು ಅವರ ಉದ್ದೇಶಕ್ಕೆ ಬಹುದೊಡ್ಡ ನೈತಿಕ ಬೆಂಬಲವಾಗುತ್ತದೆ’  ಸಂಚಲನ ಸ್ವಯಂ ಸೇವಾ ಸಂಘಟನೆ ಹಾಗೂ ಉನ್ನತಿ ಕ್ಯಾರಿಯರ್ ಅಕಾಡೆಮಿ ಉಡುಪಿ ಆಶ್ರಯದಲ್ಲಿ ಮಣ್ಣಪಳ್ಳ ಕೆರೆ ದಂಡೆಯಲ್ಲಿ ಇಂದು ‘ಕಾರ್ಗಿಲ್ ವಿಜಯ ದಿವಸ’ವನ್ನು ನಿವೃತ್ತ ಸೇನಾಧಿಕಾರಿ, ಇದೀಗ ಉಡುಪಿ ಜಿಲ್ಲೆಯ ASP ಯಾಗಿರುವ ಕುಮಾರಚಂದ್ರ ಅವರು ಮಾತನಾಡುತ್ತ, ‘ಕಾರ್ಗಿಲ್ ಹಾಗೂ ಅಲ್ಲಿನ ಕಠಿಣ ಪರಿಸ್ಥಿತಿ,ಸೈನಿಕರ ಮಾನೋದೃಢತೆ, ಅವರ ಕರ್ತವ್ಯ ಪ್ರಜ್ಞೆಗಳ ನೈತಿಕ ಬೆಂಬಲ ನೀಡಬೇಕು ಎಂದರು.
ಕಾರ್ಗಿಲ್ ಯೋಧ ಹವಾಲ್ದಾರ್ ಜಗದೀಶ್ ಪ್ರಭು ಮಾತನಾಡಿ,’ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅವರು ಸುಮಾರು 21 ದಿನಗಳವರೆಗೆ ಬಂಕರ್ ನಲ್ಲಿ ಆಹಾರ-ನಿದ್ದೆ ಇಲ್ಲದೆ ಕಳೆದ ದಿನಗಳ ಬಗ್ಗೆ ನೆನಪಿಸಿಕೊಂಡು, ಕಾರ್ಗಿಲ್ ವಿಜಯೋತ್ಸವ ಆಚರಿಸಿದ್ದ ಘಳಿಗೆಯನ್ನು ಮೆಲುಕು ಹಾಕಿದರು’

ವಿಶಿಷ್ಟವಾಗಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ನಿವೃತ್ತ ಸೇನಾಧಿಕಾರಿಗಳಾದ ಶ್ರೀ ಕುಮಾರಚಂದ್ರ, ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ಕರ್ನಲ್ (ಡಾ)ಎಫ್.ಇ.ಎ. ರಾಡ್ರಿಗಸ್, ನಿವೃತ್ತ ಸೇನಾಧಿಕಾರಿಗಳಾದ ಸುಬೇದಾರ್ ಮೇಜರ್ ಗಣಪಯ್ಯ ಎಸ್., ಕಾರ್ಗಿಲ್ ಯೋಧ ಹವಾಲ್ದಾರ್ ಜಗದೀಶ್ ಪ್ರಭು, ಮಣಿಪಾಲ್ ಮೀಡಿಯಾ ನೆಟ್ ವರ್ಕ್ಸ್ ಸಿಇಒ ವಿನೋದ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಚಲನ ಸಂಸ್ಥೆಯ ಅಧ್ಯಕ್ಷರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ಮಾತನಾಡಿ,’ನಮ್ಮ ಸಂಸ್ಥೆ ಈ ಕಾರ್ಯಕ್ರಮವನ್ನು ಕಳೆದ 5 ವರ್ಷಗಳಿಂದ ಪ್ರತೀ ವರ್ಷವೂ 527 ಹುತಾತ್ಮರ ಹೆಸರಿನಲ್ಲಿ 527 ಗಿಡಗಳನ್ನು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನೆಟ್ಟು ಗೌರವಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಈ ಯೋಜನೆಯಿಂದ ಸೈನಿಕರಿಗೆ ಗೌರವ ಸಲ್ಲಿಕೆ ಹಾಗೂ ಪರಿಸರಕ್ಕೂ ನಮ್ಮ ಕೊಡುಗೆ ಆಗುತ್ತದೆ.ಇಂದಿನ ಪೀಳಿಗೆ ನಮ್ಮ ನಿಜವಾದ ಹೀರೋಗಳನ್ನು ಮರೆಯದೆ ಅವರ ಕುಟುಂಬದೊಂದಿಗೆ ನಾವೆಲ್ಲರೂ ಇದ್ದೇವೆ ಎನ್ನುವ ಸಂದೇಶ ನೀಡಲಿದೆ’ಎಂದರು.
ಮೇಜರ್ ಸುಬೇದಾರ್ ಗಣಪಯ್ಯ ಅವರು ಮಾತನಾಡಿ’ದೇಶಸೇವೆ ಮಾಡಲು ಭಾರತೀಯ ಸೇನೆ ಒಂದು ಉತ್ತಮ ಅವಕಾಶ,ಆದ್ದರಿಂದ ನಮ್ಮ ಕರಾವಳಿಯ ಯುವಕರು ಸೇನೆಯಲ್ಲಿ ಬಡ್ತಿಗೊಂಡು ಕರ್ತವ್ಯ ನಿರ್ವಹಿಸಬೇಕೆಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಮಾತನ್ನಾಡಿದ ಕರ್ನಲ್ ಡಾ. ರಾಡ್ರಿಗಾಸ್ ಮತನ್ನಾಡುತ್ತಾ ಮನುಷ್ಯ ಸಾಯುವುದು ನಿಶ್ಚಿತ,ನಮ್ಮ ಕಾರಾವಳಿ ಪ್ರದೇಶ ಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗಿಂತ ಭಾರತೀಯ ಸೇನೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾವುಗಳು ಸಂಭವಿಸುತ್ತವೆ ಆದ್ದರಿಂದ ಭಾರಾತೀಯ ಸೇನೆಗೆ ಸೇರಲು ಸಾವಿನ ಭಯ ಬೇಡ’ ಎಂದು ತಿಳಿಸಿದರು.
ಮಣಿಪಾಲ್ ಮೀಡಿಯಾ ನೆಟ್ ವರ್ಕ್ಸ್ ಸಿಇಒ ವಿನೋದ್ ಕುಮಾರ್ ಮಾತನಾಡಿ, ನಾಗರೀಕರಾಗಿ ನಾವೆಲ್ಲರೂ ಯೋಧರೊಂದಿಗೆ ನೈತಿಕ ಬೆಂಬಲವಾಗಿ ನಿಲ್ಲಬೇಕು. ಮಾಧ್ಯಮಗಳೂ ಈ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕು. ಶ್ರಾವ್ಯ ಅವರ ಹೇ ಮೇರೆ ವತನ್ ಕೆ ಲೋಗೊ ಹಾಡಿಗೆ ಯುವ ಪ್ರತಿಭೆ ಪ್ರತಿಶ್ ರವರು ಯೋಧರ ನಮನ ಸಲ್ಲಿಸುವ ಕಲಾಕೃತಿ ರಚಿಸಿದರು.ನಂತರ ಅತಿಥಿಗಳು ಹಾಗೂ ನೆರೆದಿದ್ದ ಯುವಕರೆಲ್ಲರೂ ಹುತಾತ್ಮರ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉನ್ನತಿ ಕ್ಯಾರಿಯರ್ ಅಕಾಡೆಮಿ ಡೈರೆಕ್ಟರ್ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ ವಂದಿಸಿದರು. ವಿಜೇತಾ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ರಾಘವೇಂದ್ರ ಪೈ, ಪ್ರಮೋದ್, ಶ್ರೇಯ, ನಿಶ್ಮಿತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!