ಆಸ್ತಿ ಲಪಟಾವಣೆ : ಮಹತ್ವದ ತೀರ್ಪು ನೀಡಿದ ಹಿರಿಯ ನಾಗರಿಕ ನ್ಯಾಯ ಮಂಡಳಿ
ಉಡುಪಿ : ವೃದ್ದೆಯೋರ್ವರ ಆಸ್ತಿಯನ್ನ ಆಕೆಯ ಮಲ ಮಗಳು ಲಪಟಾಯಿಸಿದ ಪ್ರಕರಣಕ್ಕೆ ಸಂಬಂದಿಸಿ ನೊಂದಾವಣೆಯನ್ನ ರದ್ದು ಗೊಳಿಸಿ ಮಹತ್ವದ ತೀರ್ಪು ಉಡುಪಿ ಜಿಲ್ಲಾ ಹಿರಿಯ ನಾಗರಿಕರ ನ್ಯಾಯ ನಿರ್ವಾಹಣಾ ಮಂಡಳಿ ನೀಡಿದೆ ಇದರಿಂದವೃದ್ದೆಯೊಬ್ಬಳು ತನ್ನ ಆಸ್ತಿಯನ್ನ ಮರು ಪಡೆಯುವಂತಾಗಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವಿಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.
ಉಡುಪಿ ತಾಲೂಕಿನ ಕಲ್ಯಾಣಪುರ ಸಂತೆಕಟ್ಟೆಯ ನಿವಾಸಿ ವಿಜಿಲ್ ಡಿಸೋಜ ಹಲವಾರು ವರ್ಷಗಳ ಕಾಲ ಇಟೆಲಿಯಲ್ಲಿ ದುಡಿದು ಇಟಲಿ ಹಾಗೂ ಊರಿನಲ್ಲಿ ವಿವಿಧ ಸ್ಥಿರಾಸ್ತಿಗಳನ್ನು ಗಳಿಸಿದ್ದರು. ತಮ್ಮ ಮೊದಲನೇ ಪತ್ನಿ ತೆರೆಸಾ ಡಿಸೋಜಳ ಮರಣಾನಂತರ ಊರಿಗೆ ಮರಳಿ 1998 ರಲ್ಲಿ ಮೇರಿ ಡಿಸೋಜರನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸಿದ್ದರು. ಇಟಲಿಯಲ್ಲಿಯೇ ಹುಟ್ಟಿ ಬೆಳೆದ ಮೊದಲನೆಯ ಪತ್ನಿಯ ಮಗಳು ಜೂಲಿಯಾ ಇಟಲಿ ನಾಗರಿಕಳಾಗಿ ಅಲ್ಲಿಯೇ ನೆಲೆಯೂರಿದ್ದಳು.
2010 ರಲ್ಲಿ ವಿಜಿಲ್ ಡಿಸೋಜರವರು ಬದುಕಿರುವಾಗಲೇ ಎರಡು ಆಸ್ತಿಗಳನ್ನು ಹೆಂಡತಿ ಮೇರಿ ಡಿಸೋಜರವರಿಗೆ ವರ್ಗಾಯಿಸಿದ್ದರು. ಅದರಲ್ಲಿ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ 0.87 ಎಕ್ರೆ ಜಮೀನು, ಅದರಲ್ಲಿರುವ 4 ಮನೆ ಹಾಗೂ ಬಾಡಿಗೆಗೆಹಾಕಿರುವ 8 ಅಂಗಡಿಗಳನ್ನು ಪತ್ನಿ ಮೇರಿ ಡಿಸೋಜರ ಹೆಸರಿಗೆ ನೋಂದಾಯಿಸಿದ್ದರು. ಅದಾಗಿ ಮೂರು ವರ್ಷಗಳ ಬಳಿಕ 2013 ರ ಮೇ ತಿಂಗಳಲ್ಲಿ ವಿಜಿಲ್ ಡಿಸೋಜ ಮರಣಹೊಂದಿದ ಕೆಲವೇ ದಿನಗಳೊಳಗೆ ಮೇರಿಡಿಸೋಜರಿಗೆ ನೀಡಿದ್ದ ಸಕಲ ಆಸ್ತಿ ಆಶ್ಚರ್ಯಕರ ರೀತಿಯಲ್ಲಿ ಇಟಲಿಯಲ್ಲಿರುವ ಮಗಳ ಹೆಸರಿಗೆ ನೋಂದಣಿಯಾಗಿತ್ತು.
ವಿಜಿಲ್ ಡಿ”ಸೊಜಾ ಮರಣ ಹೊಂದಿದ ನಂತರ ಕೆಲವೇ ದಿನಗಳಲ್ಲಿ ಅಂತರದಲ್ಲಿ ಎರಡು ವ್ಯವಸ್ಥಾಪತ್ರಗಳ ಮೂಲಕ ಈ ಎಲ್ಲ ಆಸ್ತಿಗಳನ್ನು ವರ್ಗಾಯಿಸಲಾಗಿತ್ತು ಎಂದು ಶ್ಯಾನುಭಾಗ್ ತಿಳಿಸಿದರು. 2018 ರಲ್ಲಿ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿಗೆ ಮೇರಿ ಡಿಸೋಜ ದೂರು ದಾಖಲಾಸಿದರು.
ಈ ದೂರನ್ನು ಸ್ವೀಕರಿಸಿದ ಹಿರಿಯ ನಾಗರಿಕ ನ್ಯಾಯನಿರ್ವಹಣಾ ಮಂಡಳಿಯ ಅಧ್ಯಕ್ಷರಾದ ಡಾ| ಮಧುಕೇಶ್ವರ ಅವರುನ್ಯಾಯಾಲಯದಲ್ಲಿ ನಡೆಸಿ ಜೂಲಿಯಾಳ ಹೆಸರಿಗೆ ವರ್ಗಾವಣೆಯಾದ ಆಸ್ತಿಯನ್ನು ಮೇರಿ ಡಿಸೋಜರ ಹೆರಿನಲ್ಲಿ ಪುನರ್ದಾಖಲಿಸಲು ಉಪನೋಂದಣಾಧಿಕಾರಿ ಹಾಗೂ ಉಡುಪಿ ತಹಶಿಲ್ದಾರರಿಗೆ ಅದೇಶಿಸಿದ್ದಾರೆ. ಎಂದು ಡಾ| ಶ್ಯಾನುಭಾಗ್ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಪತ್ರೀಕಾಗೋಷ್ಠಿಯಲ್ಲಿ ಮೇರಿ ಡಿ’ಸೋಜಾ ಸಹೋದರಿ ಫೆಲ್ಸಿ ಡಿ’ಸೋಜಾ, ಪ್ರತಿಷ್ಠಾನದ ಟ್ರಸ್ಠಿ ಮುರಲೀಧರ್ ಉಪಸ್ಥಿತರಿದ್ದರು.