ಕಡಂದಲೆ: ದೇವಸ್ಥಾನದಲ್ಲಿ ದಲಿತ ಪೋಲಿಸ್ ಪೇದೆಯ ಹೊರಕ್ಕೆ ಕಳುಹಿಸಿ ಅವಮಾನ
ಮೂಡಬಿದ್ರೆ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಮೂಡಬಿದ್ರೆಯ ಕಡಂದಲೆ ಶ್ರೀ ಸುಬ್ರಮ್ಮಣ್ಯ ದೇವಳದಲ್ಲಿ ಸೋಮವಾರ ಷಷ್ಠಿ ಮಹೋತ್ಸವಕ್ಕೆ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಹೊರ ಕಳುಹಿಸಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ದೇವಸ್ಥಾನಕ್ಕೆ ಷಷ್ಠಿ ಮಹೋತ್ಸವಕ್ಕೆ ಸಾವಿರಾರು ಭಕ್ತರು ದೇವರ ದರ್ಶನ, ಹರಕೆ ತೀರಿಸಲು ಬರುತ್ತಾರೆ ಅವರನ್ನು ದೇವಳದ ಒಳಗೆ ಸರದಿಯ ಸಾಲಿನಲ್ಲಿ ಕಳುಹಿಸಲು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ದೇವಳದಲ್ಲಿ ಪ್ರಾಂಗಣದ ಒಳಗೆ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕ ಬೋಜನದ ವ್ಯವಸ್ಥೆ ಮಾಡಲಾಗಿದ್ದು, ಈ ಸಂದರ್ಭ ಪೊಲೀಸ್ ಸಿಬ್ಬಂದಿ ದಲಿತ ಸಮುದಾಯದ ಮಹಿಳೆ ಎನ್ನುವ ಕಾರಣಕ್ಕೆ ದೇವಸ್ಥಾನದಿಂದ ಹೊರಗೆ ಕಳುಹಿಸಲಾಗಿದೆಂದು ಈ ಸ್ಥಳೀಯರು ದೂರಿದ್ದಾರೆ.
ಮಾತ್ರವಲ್ಲದೆ ದೇವಳಕ್ಕೆ ಬರುವ ಭಕ್ತರನ್ನು ಜಾತಿ ಆದಾರದಲ್ಲಿ ಗುರುತಿಸಿ ಸದಾ ಹೀಯಾಳಿಸುತ್ತಿರುವುದು ಭಕ್ತರ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರಿಗೆ ಹೋಟೇಲ್ ಊಟ !
ಮಹೋತ್ಸವದ ಸಂದರ್ಭ ಸುವ್ಯವಸ್ಥೆಗೆ ನಿಯೋಜನೆಗೊಂಡ ಪೊಲೀಸರು ಮಧ್ಯಾಹ್ನ ಊಟಕ್ಕೆ ಹೋಟೆಲ್ನಲ್ಲಿ ಊಟ ಮಾಡಿದ್ದಾರೆಂದು ತಿಳಿದು ಬಂದಿದೆ. ದೇವಸ್ಥಾನದಿಂದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದರೂ ಬ್ರಾಹ್ಮಣರ ಪಂಕ್ತಿ ವ್ಯವಸ್ಥೆಯಿಂದ ಸ್ವಾಭಿಮಾನಿ ಭಕ್ತರು ಮನೆಗೆ ಬಂದು ಊಟ ಮಾಡಬೇಕಾಯಿತೆಂದು ದೇವಾಸ್ಥಾನಕ್ಕೆ ಹೋದ ಭಕ್ತರು ದೂರಿಕೊಂಡರು.