ಗೋಕಳ್ಳತನ ತಡೆಗೆ ವಿಶೇಷ ತಂಡ ರಚಿಸಲು ಆಗ್ರಹ

ಉಡುಪಿ: ಕರಾವಳಿಯಲ್ಲಿ ಗೋಕಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಜಾಣ ಕುರುಡು ಅನುಸರಿಸುತ್ತಿದೆ. ಸರ್ಕಾರ ಗೋಕಳ್ಳರನ್ನು ಬಂಧಿಸುವ ಬದಲಾಗಿ ಗೋರಕ್ಷಕರ ಮೇಲೆ ವಿನಾಕಾರಣ ಸುಳ್ಳು ಕೇಸುಗಳನ್ನು ಹಾಕಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಧಮನಿಸುವ ಕೆಲಸ ಮಾಡುತ್ತಿದೆ.

ಎರಡು ಜಿಲ್ಲೆಯಲ್ಲಿ ಗೋವು‌ ಕಳ್ಳತ ಪ್ರಕರಣ ಹೆಚ್ಚುತ್ತಿದ್ದು ಇದರ ತಡೆಗೆ ವಿಶೇಷ  ಪೊಲೀಸ್ ತಂಡ ರಚಿಸಬೇಕೆಂದು ಆಗ್ರಹಿಸಿದ್ದಾರೆ.ಈ ಬಗ್ಗೆ ಇಂದು ಸಂಘಪರಿವಾರ ಪ್ರಮುಖರ ಜೊತೆ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರು ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಹಾಗೂ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ನಿಶಾ ಜೇಮ್ಸ್ಗೆ ಮನವಿ ಸಲ್ಲಿಸಿದ್ದಾರೆ

ಈ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ವಿಹಿಂಪ ಹಾಗೂ ಬಜರಂಗದಳ ಪ್ರಮುಖರಾದ ಸುನಿಲ್ ಕೆಆರ್, ಮಹೇಶ್ ಬೈಲೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!