ಅಶೀರುದ್ದೀನ್‌ ಕವನ ಸಂಕಲನ ‘ಅಶೀರನ ಕವನಗಳು’ ಬಿಡುಗಡೆ

ಉಡುಪಿ: ಒಂದು ಭಾವನೆಯನ್ನು ಮನಸ್ಸಿನಲ್ಲಿ ಒಟ್ಟು ಸೇರಿಸಿ ಅದಕ್ಕೆ ಹೊಸ ರೂಪುಕೊಟ್ಟು ವೃಜಿಸಿ ಹೊರಹೊಮ್ಮಿಸುವ ಕ್ರಿಯೆಯೇ ಕವನ ಎಂದು ಸಾಹಿತಿ ಡಾ. ಸುರೇಶ್‌ ನೆಗಳಗುಳಿ ಹೇಳಿದರು.
ಸಂವೇದನ ಸಂಸ್ಥೆಯ ವತಿಯಿಂದ ಉಡುಪಿ ದುರ್ಗಾ ಇಂಟರ್‌ನ್ಯಾಶನಲ್‌ ಹೋಟೆಲ್‌ನ
ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಂ. ಅಶೀರುದ್ದೀನ್‌ ಮಂಜನಾಡಿ ಅವರ ಚೊಚ್ಚಲ ಕವನ ಸಂಕಲನ ‘ಅಶೀರನ ಕವನಗಳು’ ಬಿಡುಗಡೆಗೊಳಿಸಿ ಮಾತನಾಡಿದರು.
ವೇದನೆಯನ್ನು ದೂರ ಮಾಡಿ ಮನಸ್ಸಿಗೆ ಹಿತವನ್ನು ಕೊಡುವುದೇ ಸಾಹಿತ್ಯ. ಆಡು ಮಾತಿನಲ್ಲಿ ಎಲ್ಲರೂ ಕವಿಗಳೇ. ಆದರೆ ಕವಿತ್ವ ಎನ್ನುವುದು ಲೇಖಕತ್ವದಿಂದ ಪ್ರಾಪ್ತಿಯಾಗುತ್ತದೆ. ಒಂದು ಯೋಚನೆ ಅಥವಾ ಒಂದು ವಿಷಯವನ್ನು ಪ್ರಪಂಚಿಕವಾಗಿ ಮಾಡುವುದು ಬುದ್ಧಿವಂತನ ಕರ್ತವ್ಯ ಎಂದರು.
ಕವಿ ಎಂ. ಅಶೀರುದ್ದೀನ್‌ ಮಂಜನಾಡಿ ಮಾತನಾಡಿ, ಭಾವನಾತ್ಮಕವಾಗಿ ಮೂಡಿದ ಪ್ರಶ್ನೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕವನ ರಚನೆ ಮಾಡಿದ್ದೇನೆ ಎಂದು ಹೇಳಿದರು.
ಸಂವೇದನ ಸಂಸ್ಥೆಯ ಅಧ್ಯಕ್ಷ ಕಿದಿಯೂರು ನಿಹಾಲ್‌ ಸಾಹೇಬ್‌ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಸೌರಭ ಪ್ರಕಾಶನದ ನಿರ್ದೇಶಕ ಹಾಗೂ ಸಾಹಿತಿ ಜಿ.ಎಂ. ಶರೀಫ್‌ ಹೂಡೆ, ಸಾಮಾಜಿಕ ಹೋರಾಟಗಾರ ಅಬ್ದುಲ್‌ ಕರೀಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂವೇದನದ ಕಾರ್ಯದರ್ಶಿ ಎಂ. ದಾನಿಶ್‌ ಸ್ವಾಗತಿಸಿದರು. ಶಾರೂಕ್‌ ತೀರ್ಥಹಳ್ಳಿ
ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!