ಸಮ್ಮಿಶ್ರ ಸರ್ಕಾರಕ್ಕೆ ಒಂದು ವರ್ಷ ಶುಭ ಕೋರಿದ ಜೆಡಿಎಸ್ ಮುಖಂಡ : ಡಾ. ರವಿ ಶೆಟ್ಟಿ

23. ಮೇ . ಉಡುಪಿ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಮುಖ್ಯಮಂತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ . ಉಪ ಮುಖ್ಯಮಂತ್ರಿಗಳಾದ ಜಿ ಪರಮೇಶ್ವರ್ ಅವರ ನಾಯಕತ್ವದಲ್ಲಿ ಸ್ಥಾಪನೆಯಾಗಿ ನಾಳೆಗೆ ಒಂದು  ವರ್ಷವಾಗಲಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಷಯಾಧಾರಿತವಾಗಿ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷಗಳು ಸಮ್ಮಿಶ್ರ ಸರಕಾರವನ್ನು ರಚಿಸುವ ಮೂಲಕ ಜನಪರವಾದ ಆಡಳಿತವನ್ನು ನೀಡಿರುತ್ತಾರೆ.

ಇದಕ್ಕಾಗಿ ಮುಖ್ಯಮಂತ್ರಿಗಳಾದ  ಶ್ರೀ ಕುಮಾರಸ್ವಾಮಿ ರವರು  ಮತ್ತು ಉಪ ಮುಖ್ಯಮಂತ್ರಿಗಳಾದ  ಜಿ ಪರಮೇಶ್ವರ್ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಜೆಡಿಎಸ್ ಉಡುಪಿ ಜಿಲ್ಲಾ ಮುಖಂಡರಾದ ರವಿ ಶೆಟ್ಟಿ ಬೈಂದೂರು  ಅಭಿನಂದಿಸಿದರು.

ಮೊದಲ ಬಾರಿಗೆ ರಾಜ್ಯದ ರೈತರ 48 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ, ವೃದ್ಯಾಪ್ಯ ಮಾಶಾಸನ ಹೆಚ್ಚಳ, ಗರ್ಭಿಣಿಯರಿಗೆ 6 ತಿಂಗಳ ಮಾಶಾಸನ, ಬೀದಿ ವ್ಯಾಪಾರಿಗಳಿಗೆ ಬಡವರಬಂದು ಯೋಜನೆ, ಯುವಕರಿಗೆ ಉದ್ಯೋಗ ಖಾತರಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಆದ್ಯತೆ, ಬೆಂಗಳೂರು ಅಭಿರುದ್ದಿಗೆ ಬದ್ಧತೆ, ಕೃಷಿಕರ ಬದುಕಿಗೆ ಆಸರೆ, ಹೊಸ ಹೊಸ ಕೃಷಿ ಯೋಜನೆ ಜಾರಿಗೆ ಸಂಕಲ್ಪ, ಬೆಂಬಲ ಬೆಲೆಗೆ ಮತ್ತು ಮಾರುಕಟ್ಟೆ ಒದಗಿಸಲು ಕ್ರಮ, ಹಾಲಿಗೆ ಪ್ರೋತ್ಸಾಹ ಧನ, ಕೂಲಿ ಕಾರ್ಮಿಕರ ಬದುಕಿಗೆ ಪೂರಕವಾದ ಯೋಜನೆಗಳು, ಮುಂತಾದ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ಈ ಸರ್ಕಾರ ತಲುಪಿರುತ್ತದೆ. ಒಂದು ವರ್ಷದಲ್ಲಿ ಪ್ರಕೃತಿ ವಿಕೋಪ, ಬರದ ಛಾಯೆ, ಕುಡಿಯುವ ನೀರಿನ ಸಮಸ್ಯೆ, ಸಂಪನ್ಮೂಲದ ಕೊರತೆ ಮುಂತಾದ ಅಡೆ ತಡೆ ಇದ್ದರೂ ಮೈತ್ರಿ ಸರಕಾರ ಉತ್ತಮ ಗುಣಮಟ್ಟದ ಆಡಳಿತ ನೀಡಿದ , ಎರಡೂ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನೂ ಅಭಿನಂದಿಸಿ. ಈ ಸರ್ಕಾರ ಉಳಿದ ನಾಲ್ಕೂ ವರ್ಷಗಳಲ್ಲಿ ಇನ್ನೂ ಹೆಚ್ಚು ಜನಪರವಾಗಿ ಕೆಲಸ ಮಾಡಲೆಂದು ಶುಭ ಹಾರೈಸಿದರು.

ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ, ಒಂದು ಸಕ್ರಿಯ ವಿರೋಧ ಪಕ್ಷದ ಕೆಲಸ ಮಾಡುವಲ್ಲಿ ವಿಫಲವಾಗಿದ್ದು ವಾಮ ಮಾರ್ಗದಲ್ಲಿ ಸರ್ಕಾರವನ್ನು ಬೀಳಿಸುವ ಕೆಲಸದಲ್ಲೇ ತನ್ನ ಸಮಯವನ್ನು ಕಳೆದಿರುತ್ತದೆ. 104 ಶಾಸಕರ ಹೊಂದಿರುವ ಬಿಜೆಪಿ ಕ್ರಿಯಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡದೆ ಒಂದು ವರ್ಷದ ಸಮಯವನ್ನು ವಾಮ ಮಾರ್ಗದ ಅಧಿಕಾರಕ್ಕಾಗಿ ವ್ಯರ್ಥ ಮಾಡಿದ್ದು, ರಾಜ್ಯದ ಜನರಿಗೆ ಉತ್ತರ ನೀಡಬೇಕಾಗುತ್ತದೆ. ತಮ್ಮ ತಪ್ಪಿಗಾಗಿ ಅವರು ಈ ರಾಜ್ಯದ ಜನರ ಕ್ಷಮೆ ಕೇಳಬೇಕು.

Leave a Reply

Your email address will not be published. Required fields are marked *

error: Content is protected !!