ಬಿಜೆಪಿಯ ಮಾಜಿ ಸಚಿವರ ರಾಸಲೀಲೆ ವಿಡಿಯೋ ಸೆರೆ: 10 ಕೋಟಿ ರೂ.ಗೆ ಬೇಡಿಕೆ

ಬೆಂಗಳೂರು: ಬಿಜೆಪಿಯ ಮಾಜಿ ಸಚಿವರನ್ನು ಹನಿಟ್ರ್ಯಾಪ್ ಮಾಡಿ ಖಾಸಗಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಘವೇಂದ್ರ ಬಂಧಿತ ಆರೋಪಿ, ಬಿಜೆಪಿಯ ಮಾಜಿ ಸಚಿವರ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಕಳೆದ ಒಂದು ವರ್ಷದಿಂದ ಮಾಜಿ ಸಚಿವರ ವಿಡಿಯೋ ಸೆರೆ ಹಿಡಿಯಲು ರಾಘವೇಂದ್ರ ಕಾಯುತ್ತಿದ್ದನು. ಕೊನೆಗೆ ತನ್ನ ಗೆಳತಿ ಮೂಲಕ ಸಚಿವರ ವಿಡಿಯೋ ಸೆರೆ ಹಿಡಿದಿದ್ದನು. ವಿಡಿಯೋ ತೋರಿಸಿ ರಾಘವೇಂದ್ರ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದನು.

ಮೊದಲಿಗೆ ಆರೋಪಿ ಹಿನ್ನೆಲೆಯನ್ನು ಪರಿಶೀಲಿಸಿದಾಗ ರಾಘವೇಂದ್ರ ಮೊದಲಿನಿಂದಲೂ ಈ ರೀತಿಯ ಸೈಬರ್ ಕ್ರೈಂನಲ್ಲಿ ಭಾಗಿಯಾಗಿದ್ದನು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹಾಗಾಗಿ ಶಾಸಕರ ಪರವಾಗಿ ಡೀಲ್ ಮಾಡುವ ರೀತಿ ಪೊಲೀಸರು ರಾಘವೇಂದ್ರನನ್ನು ಸಂಪರ್ಕಿಸಿದ್ದಾರೆ. ರಾಘವೇಂದ್ರ ಒಂದೇ ಕಂತಿನಲ್ಲಿ 10 ಕೋಟಿ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದನು. ರಾಘವೇಂದ್ರ ಜೊತೆ ಮಾತನಾಡಿದ ಪೊಲೀಸರು ಆತನಿಗೆ ಹಣ ನೀಡುತ್ತೇವೆ ಎಂದು ನಂಬಿಸಿದ್ದರು. ಪೊಲೀಸರ ಮಾತನ್ನು ನಂಬಿದ್ದ ರಾಘವೇಂದ್ರ ಭೇಟಿಯಾದಾಗ ತೆರಳಿದಾಗ ಆತನನ್ನು ಬಂಧಿಸಿದ್ದಾರೆ.

ಆರೋಪಿ ರಾಘವೇಂದ್ರ ಶಿವಮೊಗ್ಗ ಮೂಲದ ನಿವಾಸಿಯಾಗಿದ್ದು, ತಾಯಿಯೊಂದಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದನು. ಸೈಬರ್ ಕ್ರೈಂಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಪರಿಣಿತಿ ಹೊಂದಿದ್ದನು ಎಂಬುವುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. ಸಣ್ಣ ಪುಟ್ಟ ಕ್ರೈಂ ಮಾಡಿದ್ರೆ ಸ್ವಲ್ಪ ಹಣ ಸಿಗುತ್ತದೆ. ಹೆಚ್ಚು ಹಣಕ್ಕಾಗಿ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದನು. ತನ್ನ ಗೆಳತಿ ಮೂಲಕ ಶಾಸಕರ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದನು ಎಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *

error: Content is protected !!