ರಾಜ್ಯೋತ್ಸವ ಪ್ರಶಸ್ತಿ ಪ್ರಕಟ :ಡಾ.ಕೃಷ್ಣಪ್ರಸಾದ್,ರಮೇಶ್ ರಾವ್,ಪ್ರಕಾಶ್ ಶೆಟ್ಟಿಆಯ್ಕೆ

ಉಡುಪಿ: ಪ್ರಸಿದ್ಧ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಹಾಗೂ ಚಿತ್ರಕಲಾವಿದ ರಮೇಶ್ ರಾವ್ ಸೇರಿದಂತೆ ಜಿಲ್ಲೆಯ ಐದು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

 ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಕೃಷ್ಣಪ್ರಸಾದ್, ಚಿತ್ರಕಲಾ ಕ್ಷೇತ್ರದಲ್ಲಿ ರಮೇಶ್ ರಾವ್, ಸಂಕೀರ್ಣ ಕ್ಷೇತ್ರದಲ್ಲಿ ಪ್ರಕಾಶ್ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ವಿಶ್ವನಾಥ್ ಭಾಸ್ಕರ್ ಗಾಣಿಗ ಹಾಗೂ ಹೊರನಾಡಿನಲ್ಲಿ ಕನ್ನಡ ಸೇವೆಗೈದ ಬಿ.ಜಿ. ಮೋಹನ್ ದಾಸ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 ರಾಜ್ಯ ಸರ್ಕಾರ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಉದ್ಯಮಿ ವಿಜಯ್ ಸಂಕೇಶ್ವರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ

ಒಟ್ಟು 29 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ನವೆಂಬರ್ 1ರಂದು ನಡೆಯುವ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.


ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಾಹಿತ್ಯ ಕ್ಷೇತ್ರ: ಡಾ.ಮಂಜಪ್ಪ ಶೆಟ್ಟಿ, ಮಸಗಲಿ, ಪ್ರೊ.ಬಿ.ರಾಜಶೇಖರಪ್ಪ, ಚಂದ್ರಕಾಂತ ಕರವಳ್ಳಿ, ಡಾ.ಸರಸ್ವತಿ ಚಿಮ್ಮಲಗಿ.

ರಂಗಭೂಮಿ ಕ್ಷೇತ್ರ:
ಪರಶುರಾಮ ಸಿದ್ದಿ, ಪಾಲ್ ಸುದರ್ಶನ್, ಹೂಲಿ ಶೇಖರ್, ಎನ್.ಶಿವಲಿಂಗಯ್ಯ, ಡಾ.ಎಚ್.ಕೆ.ರಾಮನಾಥ್, ಭಾರ್ಗವಿ ನಾರಾಯಣ.

ಸಂಗೀತ ಕ್ಷೇತ್ರ:
ಛೋಟೆ ರೆಹಮತ್ ಖಾನ್, ನಾಗವಲ್ಲಿ ನಾಗರಾಜ್, ಡಾ.ಮುದ್ದುಮೋಹನ, ಶ್ರೀನಿವಾಸ ಉಡುಪ,

ಜಾನಪದ ಕ್ಷೇತ್ರ:
ನೀಲ್ ಗಾರು ದೊಡ್ಡಗವಿಬಸಪ್ಪ(ಮಂಟೇಸ್ವಾಮಿ ಪರಂಪರೆ), ಹೊಳಬಸಯ್ಯ ದುಂಡಯ್ಯ ಸಂಬಳದ, ಭೀಮಸಿಂಗ್ ಸಕಾರಾಮ್ ರಾಥೋಡ್, ಉಸ್ಮಾನ್ ಸಾಬ್ ಖಾದರ್ ಸಾಬ್, ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ, ಕೆಆರ್ ಹೊಸಳಯ್ಯ.

ಶಿಲ್ಪಕಲೆ ಕ್ಷೇತ್ರ:
ವಿ.ಎ.ದೇಶಪಾಂಡೆ, ಕೆ.ಜ್ಞಾನೇಶ್ವರ

ಚಿತ್ರಕಲೆ ಕ್ಷೇತ್ರ:
ಯು.ರಮೇಶ್ ರಾವ್, ಮೋಹನ ಸಿತನೂರು

ಕ್ರೀಡಾ ಕ್ಷೇತ್ರ:
ವಿಶ್ವನಾಥ್ ಭಾಸ್ಕರ ಗಾಣಿಗ, ಚೇನಂಡ.ವಿ.ಕುಟ್ಟಪ್ಪ, ನಂದಿತ ನಾಗನಗೌಡರ್.

ಯೋಗ:
ಶ್ರೀಮತಿ ವನಿತಕ್ಕ, ಕು| ಖುಷಿ

ಯಕ್ಷಗಾನ:
ಶ್ರೀಧರ್ ಭಂಡಾರಿ ಪುತ್ತೂರು

ಬಯಲಾಟ:
ವೈ.ಮಲ್ಲಪ್ಪ ಗವಾಯಿ

ಚಲನಚಿತ್ರ:
ಶೈಲಶ್ರೀ

ಕಿರುತೆರೆ:
ಜಯಕುಮಾರ ಕೊಡಗನೂರ

ಶಿಕ್ಷಣ ಕ್ಷೇತ್ರ:
ಎಸ್.ಆರ್ ಗುಂಜಾಳ್, ಪ್ರೊ.ಟಿ.ಶಿವಣ್ಣ, ಡಾ.ಕೆ.ಚಿದಾನಂದ ಗೌಡ, ಡಾ.ಗುರುರಾಜ ಕರ್ಜಗಿ

ಸಂಕೀರ್ಣ:
ಡಾ.ವಿಜಯ ಸಂಕೇಶ್ವರ್, ಎಸ್.ಟಿ.ಶಾಂತ ಗಂಗಾಧರ್, ಪ.ಬ್ರ.ಡಾ.ಚನ್ನವೀರ ಶಿವಾಚಾರ್ಯರು, ಲೆಫ್ಟಿನೆಂಟ್ ಜನರಲ್ ಬಿಎನ್. ಬಿಎಂ ಪ್ರಸಾದ, ಡಾ.ನಾ.ಸೋಮೇಶ್ವರ್, ಕೆ.ಪ್ರಕಾಶ್ ಶೆಟ್ಟಿ, ಅಧ್ಯಕ್ಷರು ಎಂ.ಆರ್.ಜಿ ಗ್ರೂಪ್.

ಪತ್ರಿಕೋದ್ಯಮ:
ಬಿವಿ. ಮಲ್ಲಿಕಾರ್ಜುನಯ್ಯ

ಸಹಕಾರ:
ರಮೇಶ್ ವೈದ್ಯ

Leave a Reply

Your email address will not be published. Required fields are marked *

error: Content is protected !!