ತುರಿಕೆ ಸಮಸ್ಯೆಗೆ ಇಲ್ಲಿದೆ ಶೀಘ್ರ ಪರಿಹಾರ
ಸಾಮಾನ್ಯವಾಗಿ ನಮ್ಮ ದೇಹದಲ್ಲಾಗುವ ತುರಿಕೆಗಳು ಸಾಕಷ್ಟು ಕಿರಿಕಿರಿಯುಂಟು ಮಾಡುತ್ತವೆ. ಶಿಲೀಂದ್ರ ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟುಗುವ ತುರಿಕೆಗಳು ಚಿಕ್ಕ ಚಿಕ್ಕ ಗುಳ್ಳೆಗಳಾಗಿ ಗಾಯಗಳಾ ಬಹುದು. ಇದರಿಂದ ಸಮಸ್ಯೆಗಳ ಸರಮಾಲೆ ಕೂಡ ಪ್ರಾರಂಭವಾಗುತ್ತವೆ. ಹಾಗಾದ್ರೆ ಶಿಲೀಂದ್ರ ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟುಗುವ ತುರಿಕೆಗಳನ್ನು ಕಡಿಮೆ ಮಾಡುವ ಮನೆ ಮದ್ದು ಇಲ್ಲಿದೆ.
ಸಾಮಾನ್ಯವಾಗಿ ತುಳಿಸಿ ಎಲೆ ತುರಿಕೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ತುರಿಕೆ ಕಡಿಮೆಯಾಗಬೇಕೆಂದರೆ ಒಂದಿಷ್ಟು ತುಳಸಿ ಎಲೆಗಳನ್ನು ಚೆನ್ನಾಗಿ ಅರೆದು ರಸ ತೆಗೆದುಕೊಳ್ಳಬೇಕು. ಅದಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ತುರಿಕೆ ಆಗುತ್ತಿರುವ ಜಾಗದಲ್ಲಿ ತೆಳುವಾಗಿ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.
ಇನ್ನು ನಿಂಬೆ ರಸ ಕೂಡ ಮುಖ್ಯವಾಗಿ ತುರಿಕೆಗೆ ರಾಮಬಾಣವಾಗುತ್ತದೆ. ನಿಂಬೆ ರಸ ಸಂಗ್ರಹಿಸಿಟ್ಟು ಚರ್ಮದ ಮೇಲಾಗುವ ತುರಿಯ ಭಾಗಕ್ಕೆ ಹತ್ತಿಯುಂಡೆಯಿಂದ ತೆಳುವಾಗಿ ಹಚ್ಚಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆಯಿರಿ. ನಿಂಬೆಯಲ್ಲಿ ಉರಿಯೂತ ನಿವಾರಕ ಹಾಗೂ ತುರಿಕೆ ನಿವಾರಕ ಅಂಶಗಳಿವೆ. ಹಾಗಾಗಿ ತುರಿಕೆ ಕಡಿಮೆಯಾಗುತ್ತದೆ.
ಇನ್ನು ಬೇವು ಕೂಡ ತ್ವಚೆಗೂ ಅತ್ಯತ್ತಮ ಮನೆಔಷಧ. ಹಲವಾರು ಚರ್ಮ ರೋಗಕ್ಕೆ ಬೇವಿನ ಎಲೆಗಳನ್ನು ಉಪಯೋಗ ಮಾಡುತ್ತಾರೆ. ಸದ್ಯ ತುರಿಕೆಗೂ ಬೇವಿನ ಸೊಪ್ಪು ಪ್ರಮುಖ ಮನೆ ಮದದಾಗಿದೆ. ಬೇವಿನ ಎಲೆಗಳನ್ನು ಅರೆದು ತುರಿಕೆ ಇರುವ ಜಾಗಕ್ಕೆ ತೆಳುವಾಗಿ ಹಚ್ಚಬೇಕು. ಇನ್ನು ಬೇವಿನ ಎಣ್ಣೆಯನ್ನು ಲೇಪನ ಮಾಡಬೇಕು. ಇನ್ನು ಹಲವಾರು ರೋಗಗಳಿಗೆ ರಾಮಭಾಣ ಲೋಳೆ ಸರ. ಈ ಲೋಳೆಸರ ತುರಿಗೆಗೂ ಕೂಡ ಸಾಕಷ್ಟು ಪರಿಣಾಮಕಾರಿಯಾಗಿರುವ ಅಂಶ.
ಸದ್ಯ ಈ ಲೋಳೆಸರದ ತಿಳಿಯನ್ನು ತೆಗೆದು ಅದನ್ನು ಸಂಗ್ರಹಿಸಿಟ್ಟು ತುರಿಗೆಯಾಗುತ್ತಿರುವ ಭಾಗಕ್ಕೆ ನೇರವಾಗಿ ಹಚ್ಚಬೇಕು. ನಂತರ ಅದನ್ನು 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನೊಂದಿಗೆ ತೊಳೆದರೆ ಸಾಕು. ತುರಿಗೆ ಕಡಿಮೆಯಾಗುತ್ತದೆ.