ಪುತ್ತೂರು ಇನ್ನೊಂದು ಅತ್ಯಾಚಾರ ಪ್ರಕರಣ – ಆರೋಪಿ ಬಂಧನ
ಪುತ್ತೂರು: ಇಲ್ಲಿನ ಕಾಲೇಜ್ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಹದಿನೈದು ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಇನ್ನೊಂದು ಪ್ರಕರಣ ನಡೆದಿದೆ.
ಅಜಿತ್ ಎನ್ನುವಾತ ಶಾಲೆಗೆ ಹೋಗುವ ಸುಮಾರು ಹದಿನೈದು ವರ್ಷ ಪ್ರಾಯದ ಹುಡುಗಿಗೆ ನಿನ್ನ ತಾಯಿ ತಲೆ ತಿರುಗಿ ಬಿದ್ದಿದ್ದಾರೆಂದು ಸುಳ್ಳು ಹೇಳಿ ಪಳನಿರು ಎಂಬ ನಿರ್ಜನ ಕಾಡಿಗೆ ಪುಸಲಾಯಿಸಿ ಕರೆದುಕೊಂಡು ಹೋಗಿ ಆಕೆಯನ್ನು ಮ್ರಗೀಯ ರೀತಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ.
ಶಾಲೆಗೆ ಹೋಗುವ ಬಾಲಕಿಯನ್ನು ಆರೋಪಿಯು ಕೈ ಹಿಡಿದು ಎಳೆದುಕೊಂಡು ಹೋಗಿ ಬಾಯಿಗೆ ಕೈಯನ್ನು ಅಡ್ಡ ಹಿಡಿದಾಗ ನೊಂದ ಬಾಲಕಿಯು ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಸ್ವಲ್ಪ ಹೊತ್ತು ಕಳೆದು ಎಚ್ಚರವಾದಾಗ ಧರಿಸಿದ್ದ ಸಮವಸ್ತ್ರ ಅಸ್ತವ್ಯಸ್ತವಾಗಿ ಬಿದ್ದಿದ್ದು, ನಂತರ ನೊಂದ ಬಾಲಕಿಯು ಆಯಾಸಗೊಂಡು ಮನೆಗೆ ಹೋಗಿ ಮಲಗಿದ್ದನ್ನು ನೋಡಿದ ತಾಯಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿಯ ಮೇಲೆ ಅಜಿತ್ ಎಂಬಾತನು ಅತ್ಯಾಚಾರ ಎಸಗಿರುವುದಾಗಿ ಗೊತ್ತಾಗಿ ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿದೆ.