ರಾಜ್ಯದಲ್ಲಿ ಬಿಜೆಪಿ ಸೇರಿ ಸರ್ವ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬರಬೇಕು – ಪೇಜಾವರ ಶ್ರೀ

ಉಡುಪಿ: ರಾಜ್ಯದಲ್ಲಿ ಬಿಜೆಪಿ ಸೇರಿ ಸರ್ವ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬರಬೇಕು. ಬಿಜೆಪಿ ಯಾವುದೇ ಕಾರಣಕ್ಕೂಆಪರೇಷನ್ ಕಮಲ ಮಾಡಬಾರದು. ಈಗಿರುವ ಸರ್ಕಾರ ಬಿದ್ದರೆ ರಾಷ್ಟ್ರಪತಿ ಆಳ್ವಿಕೆ ಬರುತ್ತದೆ. ಇದರಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲ್ಲ. ಚುನಾವಣೆ ನಡೆದರೆ ಅನಾವಶ್ಯಕ ಖರ್ಚು. ಹಾಗಾಗಿ ಬಿಜೆಪಿ  ಬೆಂಬಲ ನೀಡಿ ಸರ್ಕಾರ ಮುಂದುವರಿಸಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ಪೇಜಾವರ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಬರಗಾಲ ಮಳೆಗಾಲ ಇದೆ ಈ ಹಂತದಲ್ಲಿ ಸರ್ಕಾರ ಬೀಳಬಾರದು. ಎರಡನೇ ಮಹಾಯುದ್ಧ ಕಾಲದಲ್ಲಿ ಬ್ರಿಟನ್ ನಲ್ಲಿ ಎಲ್ಲ ಪಕ್ಷಗಳು ಸೇರಿ ಸರ್ಕಾರ ನಡೆಸಿದ್ದವು. ಆಗ ಚರ್ಚಿಲ್ ಪ್ರಧಾನಿಯಾಗಿದ್ದರು. ಸದ್ಯ ಕೇಂದ್ರ ದಲ್ಲಿ ಈ ರೀತಿಯ ಮಾಡಬೇಕಾದ ಅಗತ್ಯವಿಲ್ಲ ಬಿಜೆಪಿಗೆ ಸಂಪೂರ್ಣ ಬಹುಮತ ಇದೆ ಎಂದರು.

ಜೈನರು ಹಾಗೂ ಹಿಂದೂಗಳನ್ನು ಬ್ರಿಟಿಷರು ಬೇರೆ ಬೇರೆ ಮಾಡಿದ್ದರು ಎನ್ನುವುದು ನನ್ನ ಭಾವನೆ. ಆದರೆ ಜೈನರು ವಿಶ್ವ ಹಿಂದೂ ಪರಿಷತ್ ಗೆ  ಬರುತ್ತಾರೆ. ಹಿಂದು ಮತವನ್ನು ಒಪ್ಪಿದ್ದಾರೆ.

ಸಿಖ್ಖರು ಕೂಡ ಹಿಂದು ದೇವರನ್ನು ಪೂಜಿಸುತ್ತಾರೆ. ಆದ್ದರಿಂದ ಅವರು‌ ಬೇರೆಯಲ್ಲ. ಅವರು ಹಿಂದೂಗಳೆಂದು ಸ್ವಾಮೀಜಿ ಪ್ರತಿಪಾದಿಸಿದರು. ಶಿರೂರು ಮಠಕ್ಕೆ ಶಿಷ್ಯ ಸ್ವೀಕಾರದ ಕುರಿತಂತೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಶಿರೂರು ಮಠದ ಕೇಸ್ ಗಳು ಇತ್ಯರ್ಥ ಆಗದೆ ಶಿಷ್ಯತ್ವ ಸ್ವೀಕರಿಸಲು ಯಾರು ಮುಂದೆ ಬರುತ್ತಿಲ್ಲ.

ಪಲಿಮಾರು ಮಠಕ್ಕೆ ಶಿಷ್ಯ ಸಿಕ್ಕಿದ್ದರೆ, ಪುತ್ತಿಗೆ ಮಠಕ್ಕೂ ಸಿಕ್ಕದರೆ. ಆದರೆ ಶಿರೂರು ಮಠಕ್ಕೆ ಶಿಷ್ಯರಾಗಲು ಹೆದರುತ್ತಾರೆ. ಹಾಗಾಗಿ ಮೊದಲು ಶಿರೂರು ಮಠದಲ್ಲಿ ತಲೆದೂರಿರುವ ಸಮಸ್ಯೆಗಳ ಇತ್ಯರ್ಥ ಆಗಬೇಕು. ಇದೇ ಕಾರಣಕ್ಕೆ ಬೃಂದಾವನ ನಿರ್ಮಾಣ ಸಹ ವಿಳಂಬ ಆಗಿರಬೇಕು ಎಂದು ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!