ಮಲೆನಾಡಿನ ಜನರ ಪ್ರಸಿದ್ದಿ ಅಡುಗೆಗಳಲ್ಲಿ ಒಂದಾದ ಪುನರ್ಪುಳಿ ಸಾರು
ಮನೆಯಲ್ಲಿ ಹಲವು ಬಗೆ ಬಗೆಯ ಅಡುಗೆಗಳನ್ನು ಮಾಡಿ ಸವಿಯುತ್ತೇವೆ, ಆದ್ರೆ ಕೆಲವು ಆರೋಗ್ಯಕರ ಮನೆಮದ್ದಿನ ರೀತಿಯಲ್ಲಿರುವಂತ ಅಡುಗೆಗಳು ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ. ಅಂತಹ ಅಡುಗೆಗಳ ಸಾಲಿನಲ್ಲಿರುವಂತ ಈ ವಿಶೇಷವಾದ ಅಡುಗೆಯನ್ನು ಹೇಗೆ ಮಾಡಬೇಕು ಇದರಿಂದ ಏನೆಲ್ಲಾ ಲಾಭವಿದೆ ಅನ್ನೋದನ್ನ ಮುಂದೆ ತಿಳಿಸುತ್ತೇವೆ ನೋಡಿ.
ಮಲೆನಾಡಿನ ಜನರ ಪ್ರಸಿದ್ದಿ ಅಡುಗೆಗಳಲ್ಲಿ ಈ ಅಡುಗೆ ಕೂಡ ಒಂದಾಗಿದೆ ಇದನ್ನು ಪುನರ್ಪುಳಿ ಅಡಿಗೆ ಎಂಬುದಾಗಿ ಕರೆಯುತ್ತಾರೆ. ಈ ಅಡುಗೆ ಹಲವು ಔಷದಿ ಗುಣಗಳನ್ನು ಹೊಂದಿದೆ, ಹಾಗೂ ಇದರ ಸೇವನೆಯಿಂದ ಉತ್ತಮ ಅರೋಗ್ಯ ವೃದ್ಧಿಯಾಗುವುದು. ಮಲಬದ್ಧತೆ, ಅಜೀರ್ಣ, ಸಂಕಟ, ಪಿತ್ತ, ಮಾರ್ನಿಂಗ್ ಸಿಕ್‌ನೆಸ್, ಶೀತ ಮುಂತಾದ ಸಮಸ್ಯೆಗಳಿಗೆ ತಕ್ಷಣ ರಿಲೀಫ್ ನೀಡುತ್ತದೆ ಪುನರ್ಪುಳಿ ಅಡುಗೆ ಮಳೆಗಾಲದಲ್ಲಿ ಇದರ ಸೇವನೆ ಅತಿ ಉತ್ತಮ ಯಾಕೆಂದರೆ ಮಳೆಗಾಲದಲ್ಲೆಯೇ ಹೆಚ್ಚು ರೋಗಗಳು ಹರಡುವುದು ಹಾಗಾಗಿ ಇದರ ತಯಾರಿ ಹೇಗಿರಬೇಕು ಅನ್ನೋದನ್ನ ತಿಳಿಸುತ್ತೇವೆ.
ತಯಾರಿಸಲು ಬೇಕಾಗುವ ಸಾಮಗ್ರಿಗಳು: ನಾಲ್ಕು ಒಣ ಪುನರ್ಪುಳಿ ಅಥವಾ ಅರ್ಧ ಕಪ್ ಕೋಕಂ ಸಿರಪ್
ಎರಡು ಚಮಚ ಕರಿಮೆಣಸಿನ ಕಾಳಿನ ಪುಡಿ (ಇದು ಶೀತಕ್ಕೆ ಒಳ್ಳೆಯದು), ಒಂದು ಚಮಚ ತುಪ್ಪ, ಅರ್ಧ ಚಮಚ ಬೆಲ್ಲ, ಅರ್ಧ ಚಮಚ ಜೀರಿಗೆ, ಒಂದು ಹಸಿಮೆಣಸು, 10 ಕರಿಬೇವು, 2 ಚಮಚ ಕೊತ್ತಂಬರಿ ಸೊಪ್ಪು, ನೀರು ಹಾಗೂ ರುಚಿಗೆ ತಕ್ಕಸ್ಟು ಉಪ್ಪು
ತಯಾರಿಸುವ ವಿಧಾನ: ಮೊದಲು ಪುನರ್ಪುಳಿಯನ್ನು ಅರ್ಧ ಗಂಟೆಗಳ ಕಾಲ ಒಂದು ಕಪ್ ಬಿಸಿನೀರಿನಲ್ಲಿ ನೆನೆಸಿಡಿ. ಅದು ಮೆತ್ತಗಾದ ಬಳಿಕ ಚೆನ್ನಾಗಿ ಹಿಂಡಿ ರಸ ತೆಗೆಯಿರಿ. ನಂತರ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ. ಅದು ಸಿಡಿಯುತ್ತಿದ್ದಂತೆಯೇ ಪುನರ್ಪುಳಿ ರಸವನ್ನು ಬಾಣಲೆಗೆ ಸುರಿದುಬಿಡಿ.
ಇನ್ನೊಂದು ಲೋಟ ನೀರು, ಉಪ್ಪು, ಹಸಿಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ.
ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಅರ್ಧ ಚಮಚ ಬೆಲ್ಲ ಸೇರಿಸಿ ಮಿಕ್ಸ್ ಮಾಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಗೂ ಪೆಪ್ಪರ್ ಪೌಡರ್ ಹಾಕಿ ಗೊಟಾಯಿಸಿ ಇನ್ನೊಂದು ರೌಂಡ್ ಕುದಿಸಿ.
ಬಿಸಿಯಿದ್ದಾಗಲೇ ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಿ ಇಲ್ಲವೇ ಲೋಟಕ್ಕೆ ಹಾಕಿ ಕುಡಿದರೂ ಚೆನ್ನಾಗಿರುತ್ತದೆ. ರಸಂ ಸ್ವಲ್ಪ ಹುಳಿ ಇದ್ದರೆ ಇಷ್ಟವಾಗುತ್ತದೆ ಎನ್ನುವವರು ಸ್ವಲ್ಪ ಹುಣಸೆರಸ ಸೇರಿಸಬಹುದು.