ಪಡುತೋನ್ಸೆ ಗುಜ್ಜರಬೆಟ್ಟು ಹೂಡೆ ಸಮುದ್ರ ಕೊರೆತ : ತ್ವರಿತ ಪರಿಹಾರಕ್ಕೆ ಸಭಾಪತಿ ಅಗ್ರಹ
ಉಡುಪಿ – ಕಳೆದ ಒಂದು ವಾರದಿಂದ ನಿರಂತರ ಬರುತ್ತಿರುವ ತೀವ್ರ ಮಳೆಯಿಂದಾಗಿ ಉಡುಪಿ ತಾಲೂಕಿನ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡುತೋನ್ಸೆ ಗುಜ್ಜರಬೆಟ್ಟು ಹೂಡೆಯ ಬಳಿ ಸಮುದ್ರ ಕೊರೆತ ತನ್ನ ತೀವ್ರತೆಯನ್ನು ಪಡೆದ ಪರಿಣಾಮವಾಗಿ ಬಹಳಷ್ಟು ಹಾನಿ ಸಂಭವದ ಪರಿಸ್ಥಿತಿಯುಂಟಾಗಿದ್ದು ಈ ಭಾಗದಲ್ಲಿ ತುರ್ತು ಪರಿಹಾರ ಕಾರ್ಯವನ್ನು ಕೈಗೊಳ್ಳುವಂತೆ ಇಂದಿಲ್ಲಿ ಈ ಪ್ರದೇಶಗಳಿಗೆ ಬೇಟಿ ನೀಡಿದ ಮಾಜಿ ಶಾಸಕ, ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಯು. ಆರ್. ಸಭಾಪತಿಯವರು ರಾಜ್ಯಸರಕಾರವನ್ನು ಅಗ್ರಹಿಸಿದ್ದಾರೆ. ಇದೇ ರೀತಿ ಸಮುದ್ರ ಕೊರೆತ ತೀವ್ರತೆ ಇನ್ನಷ್ಟು ಮುಂದರಿದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೆಂಗಿನ ಮರಗಳು, ಸ್ಥಳೀಯ ವಾಸಿಸುವವರ ಮನೆಗಳಿಗೆ ಹಾನಿಯಾಗಲಿದ್ದು ಇದನ್ನು ತಡೆಯಲು ತುರ್ತು ಕಾಮಗಾರಿಯ ಅವಶ್ಯಕತೆಯಿದೆಯೆಂದು ಸಭಾಪತಿ ಒತ್ತಾಯಿಸಿದ್ದಾರೆ. ಅವರು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಹಾನಿ ಪ್ರದೇಶದ ವೀಕ್ಷಣೆಗೈದರು.
ಸಭಾಪತಿಯವರೊಂದಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜ್ಯ ಮೀನುಗಾರ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಉಪೇಂದ್ರ ಮೆಂಡನ್, ಕೆಮ್ಮಣ್ಣು ಹೂಡೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಜಿಯಾ ಸಾಧಿಕ್, ಕೆಮ್ಮಣ್ಣು ಗ್ರಾಮ ಪಂಚಾಯತ್ ಸದಸ್ಯರುಗಳಾದ ನಿತ್ಯಾನಂದ ಕೆಮ್ಮಣ್ಣು, ಶ್ರೀಮತಿ ಜೆನ್ನಿಫರ್ ಡಿ’ಸೋಜ, ಅಷ್ಪಾಕ್ ಸಾಬ್, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉಸ್ತಾದ್ ಸಾಧಿಕ್, ಸಂಪತ್ ಕುಮಾರ್, ಸಂತೋಷ್, ಭಾಸ್ಕರ್, ಶಂಕರ್, ಗೋಪಾಲ್, ವಾಸು, ಹರೀಶ್, ಆನಂದ್, ಸದಾನಂದ, ಮುಖೇಶ್, ವಿಶ್ವಾಸ್, ಶಾಶ್ವತ್ ಕುಮಾರ್ ಮತ್ತಿತರರು ಇದ್ದರು.