ಸಂಪುಟ ಸಂಭ್ರಮಕ್ಕಿಂತ ಸಂತ್ರಸ್ತರ ರಕ್ಷಣೆ ಮುಖ್ಯ – ಉಗ್ರಪ್ಪ ಹೇಳಿಕೆಗೆ ಕೋಟ ತಿರುಗೇಟು.

ಉಡುಪಿ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 17 ದಿನ ಸಂದರೂ, ಸಂಪುಟ ,ರಚನೆಯಾಗದಿರುವ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಉಗ್ರಪ್ಪ ಕಟುವಾಗಿ ಟೀಕಿಸಿ, ಯಾವುದೇ ಸರ್ಕಾರ ರಚನೆಗೆ 8 ದಿನಗಳೊಳಗೆ ಸಚಿವ ಸಂಪುಟ
ರಚಿಸದಿದ್ದರೆ ರಾಜ್ಯಪಾಲರು ಸರಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿರುವುದಕ್ಕೆ, ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಮಾಜಿವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕುಮಾರ ಸ್ವಾಮಿಯವರ ಸಮ್ಮಿಶ್ರ
ಸರ್ಕಾರ ಸಚಿವ ಸಂಪುಟ ರಚನೆ 14 ದಿನಗಳನ್ನು ತೆಗೆದು ಕೊಂಡಿತ್ತು. 8 ದಿನಗಳ ಅವಧಿ ಸೂತ್ರ ಹಿಂದಿ ಸರಕಾರಕ್ಕೆ ಅನ್ವಯಿಸಿಲ್ಲ ಏಕೆ? ಎಂದು,ಪ್ರಶ್ನಿಸಿದ್ದಾರೆ.ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ 4
ದಿನಗಳಲ್ಲಿ ರಾಜ್ಯದಲ್ಲಿ ಜಲಪ್ರಳಯ ಉಂಟಾಗಿದ್ದು, 17 ಜಿಲ್ಲೆಗಳು ಹಿಂದೆಂದೂ ಕಂಡು ಕೇಳರಿಯದ ಅತಿವೃಷ್ಟಿ ಉಂಟಾಗಿದೆ. ಹಿರಿಯರಾದ ಉಗ್ರಪ್ಪನವರಿಗೂ, ತಿಳಿದಿರುವಂತೆ ರಾಜ್ಯದಲ್ಲಿ 50 ಸಾವಿರ ವಾಸ್ತವ್ಯದ ಮನೆಗಳು ಕುಸಿದು
ಹೋಗಿದೆ. 40ಕ್ಕೂ ಹೆಚ್ಚು ಜನರು ಜಲ ಪ್ರಳಯ ಕ್ಕೆ ಬಲಿಯಾಗಿದ್ದಾರೆ. ನೂರಾರು ಸೇತುವೆಗಳು ಕುಸಿದು ಹೋಗಿವೆ. 86 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. 4 ಲಕ್ಷ ಹೆಕ್ಟೇರ್ ಕೃಷಿ ಭೂಮಿ
ನೆಲಸಮವಾಗಿದೆ. ಇಂತಹ ಸಂದರ್ಭದಲ್ಲಿ ಸಚಿವ ಸಂಪುಟ ಸಂಭ್ರಮಾಚರಣೆ ಗಿಂತಲೂ, ಮುಂದೆ ಸಚಿವರಾಗುವ ಶಾಸಕರ ಸಹಿತ ಎಲ್ಲಾಜನಪ್ರತಿನಿಧಿಗಳು ಸಂತೃಪ್ತರ ರಕ್ಷಣೆ ಗೆ ನಿಂತಿದ್ದಾರೆ. ಸ್ವತಃ ಮುಖ್ಯಮಂತ್ರಿ
ಯಡಿಯೂರಪ್ಪನವರು ನಿರಂತರ 10ಕ್ಕೂ ಹೆಚ್ಚು ದಿನಗಳಿಂದ ಪ್ರವಾಹ ಪೀಡಿತ  ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಜನರ ಮಧ್ಯೆ ಕುಳಿತು ಅಧಿಕಾರಿಗಳ ಜೊತೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೇ ದಿನ 2-3 ಕಡೆ ಭೇಟಿ
ನೀಡುತ್ತಿದ್ದಾರೆ. 1,300 ಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳನ್ನು ತೆರೆದು ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ. ಉಗ್ರಪ್ಪನವರಾಗಲಿ, ಡಿ.ಕೆ.ಶಿವಕುಮಾರ್‌ರವರಗಾಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಧ್ವಜರೋರಣ ಸಂಭ್ರಮಕ್ಕಿಂತಲೂ ಜಲಾವೃತವಾದ  ಸಾಮಾನ್ಯ ಜನರ ಬದುಕು ಕಟ್ಟಿ ಕೊಡುವಲ್ಲಿ ಸರ್ಕಾರದ ಧಾವಂತ ಅರ್ಥಮಾಡಿಕೊಳ್ಳಬೇಕೆಂದು ಕೋಟ ವಿನಂತಿಸಿದ್ದಾರೆ. ಇಡೀ ರಾಜ್ಯದಲ್ಲಿ ಮನೆಗಳನ್ನು ಕಳೆದುಕೊಂಡ ಸಂಕಷ್ಟಪೀಡಿತ
ಕುಟುಂಬಗಳಿಗೆ ಪ್ರತಿ ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು 5 ಲಕ್ಷ ಘೋಷಿಸಿದ್ದಾರೆ. 50 ಸಾವಿರ ಮನೆಗಳ ದುರಂತಕ್ಕೆ ಒಳಗಾಗಿದ್ದು, ಕೇವಲ ಮನೆಗಳ ಪುನರ್‌ನಿರ್ಮಾಣಕ್ಕೆ ತುರ್ತು ರೀಪೆರಿಗೆ 3 ಸಾವಿರ ಕೋಟಿ ರೂ ಹೊರೆ
ಬರಲಿದೆ. ನಿರಾಶ್ರಿತ ಕುಟುಂಬಗಳಿಗೆ ತುರ್ತು ಪರಿಹಾರವಾಗಿ ರೂ 10000 ಘೋಷಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಪುನರ್‌ನಿರ್ಮಾಣ ಮಾಡುವವರೆಗೆ ಬಾಡಿಗೆ ಮನೆಯಲ್ಲಿ ಇರಲು ಮಾಸಿಕ 5000 ರೂ ಬಾಡಿಗೆ ನೀಡಲಾಗುತ್ತದೆ
ಹಾಗೂ ಕೇಂದ್ರ ಸರಕಾರದಿಂದ ನಿಶ್ಚಿತವಾಗಿ ನೆರವು ಹರಿದು ಬರಲಿದೆ ಇಂತಹ ಸಂದರ್ಭ ಪಕ್ಷ ಭೇದ ಮರೆತು ಎಲ್ಲಾ ಪಕ್ಷದ ಶಾಸಕರು ಸಂತ್ರಸ್ತರ ಪರವಾಗಿ ದುಡಿಯುವಾಗ ವಿಪಕ್ಷಗಳು ಟೀಕೆಗೆ ಟೀಕೆ ಮಾಡುವುದು ತರವಲ್ಲ ಎಂದು
ಕೋಟ ಹೇಳಿಕೆಯಲ್ಲಿ ತಿಳಿಸಿದ್ದು ವಿರೋಧ ಪಕ್ಷಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಉಗ್ರಪ್ಪ ಮತ್ತು ಡಿ.ಕೆ.ಶಿವಕುಮಾರ್‌ರವರಿಗೆ ಆಗ್ರಹಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!