ಉಡುಪಿಯಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳು – ಬದಲಾವಣೆ ಬೇಕಿದೆ

ಉಡುಪಿ: ಪರಶುರಾಮ ಸೃಷ್ಟಿಯ ದೈವ-ದೇವರುಗಳು ನೆಲೆಸಿರುವ ಕಾರ್ನಿಕದ ಬೀಡು ನಮ್ಮ ತುಳುನಾಡು. ಬುದ್ದಿವಂತರ ಜಿಲ್ಲೆಯಂದೇ ಹೆಸರುವಾಸಿಯಾಗಿರುವ ನಮ್ಮ ಉಡುಪಿಯಲ್ಲಿ ಅದೆಷ್ಟೋ ಪ್ರತಿಭೆಗಳು, ಉದ್ಯಮಿಗಳು  ರಾಷ್ಟ್ರ ಹಾಗೂ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿ ನಮ್ಮ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ..

ಅದ್ಯಾಕೋ ಏನೋ,,ಯಾವುದಕ್ಕೂ ಕೊರತೆಯಿರದ ನಮ್ಮ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನೀರು,ಮರಳು ಹಾಗೂ ಉದ್ಯೋಗಕ್ಕಾಗಿ ಜನ ಪರದಾಡುವಂತಾಗಿದೆ.ಸುಲಭವಾಗಿ ಕೈಗೆಟಕುವ ದರದಲ್ಲಿ ಸಿಗುತ್ತಿದ್ದ ಮರಳು ಈಗ ಚಿನ್ನದ ಕಡಲೆಯಂತಾಗಿದೆ.ಮಧ್ಯಮ ವರ್ಗದ ಜನರ ಬದುಕು ಕಮರಿ ಹೋಗಿದೆ.ಅದೆಷ್ಟೋ ಕೈಗಳು ಕೆಲಸವಿಲ್ಲದೆ ಕಣ್ಣೀರಿಟ್ಟಿವೆ.. ಮರಳಿನ ಸಮಸ್ಯೆಯಿಂದ ಆದ ಕಷ್ಟ, ಅನುಭವಿಸಿದ ಜನ ಸಾಮಾನ್ಯರಿಗೆ ಮಾತ್ರ ಗೊತ್ತು.

ತಂಪಾಗಿದ್ದ ಉಡುಪಿಗೂ ನೀರಿನ ಸಮಸ್ಯೆ ತಲೆದೂರಿದ್ದು ಇದೇ ವರ್ಷ. ನೀರಿನ ಅಭಾವ ತಿಳಿಯದ ನಮಗೆ ಈಗ ೪ ದಿನಕ್ಕೊಮ್ಮೆ ಸ್ನಾನ ಮಾಡೋ ಪರಿಸ್ಥಿತಿ ಎದುರಾಗಿದೆ. ನಾವಾಗಿ ಮಾಡಿಕೊಂಡದ್ದೋ ಅಥವಾ ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಪ್ರಕೃತಿ ಮುನಿಸಿದ್ದೋ ಆ ದೇವರಿಗೆ ಗೊತ್ತು.ಯುವ ಜನಾಂಗ ದೇಶದ ಆಸ್ತಿ ಇದ್ದಂತೆ. ಆದರೆ ವಷಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಂದ ಪದವೀಧರರಾಗಿ ಹೊರಹೊಮ್ಮಿದರೂ ಸೂಕ್ತವಾದ ಉದ್ಯೋಗವಿಲ್ಲದೆ ಹೊರ ರಾಜ್ಯ ಹಾಗೂ ಹೊರ ದೇಶದ ದಾರಿ ಹಿಡಿಯಬೇಕಿದೆ..ಯಾರೊಬ್ಬರೂ ಇಲ್ಲಿ ಉನ್ನತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಮಾಡುವಂತಹ ಕಂಪನಿಗಳನ್ನು ಕರೆತರುವ ಸಾಹಸ ಮಾಡಲಿಲ್ಲ..

ಅದೇನೇ ಇರಲಿ,ಸಣ್ಣಪುಟ್ಟ ಸಮಸ್ಯೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಕಾಡುವ ಮೊದಲು ಎಚ್ಚೆತ್ತುಕೊಂಡು ಪ್ರಜ್ಞಾವಂತ ನಾಗರಿಕರಾಗೋಣ..

 

ರೂಪೇಶ್ ಜೆ.ಕೆ

 

 

1 thought on “ಉಡುಪಿಯಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳು – ಬದಲಾವಣೆ ಬೇಕಿದೆ

  1. Nivu uttamaritiyada ondu yochaneyannu sarakarada munde ettidiri… Sarakara edara bagge chintane nadesa beku

Leave a Reply

Your email address will not be published. Required fields are marked *

error: Content is protected !!