ಪ್ರಧಾನಿ ಮೋದಿ ವಿದೇಶ ಪ್ರಯಾಣ ವೆಚ್ಚ 255 ಕೋಟಿ ರೂ.!

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರಯಾಣಗಳಿಗಾಗಿ ಸುಮಾರು 255 ಕೋಟಿ ರೂ ವೆಚ್ಚಮಾಡಲಾಗಿದೆ  ಎಂದು ಸರ್ಕಾರ ರಾಜ್ಯ ಸಭೆಗೆ ತಿಳಿಸಿದೆ.

2016-19ರ ನಡುವೆ ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸಗಳಿಗೆ ಬಳಸಲಾಗಿರುವ ಚಾರ್ಟರ್ ವಿಮಾನಗಳಿಗಾಗಿ 255 ಕೋಟಿ ರೂ. ವೆಚ್ಚವಾಗಿದೆ  ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2016-17 ಸಾಲಿನಲ್ಲಿ  76.27 ಕೋಟಿ ರೂ 2017-18ರಲ್ಲಿ .99.32 ಕೋಟಿರೂ  ಹಾಗೂ 2018-19ರಲ್ಲಿ ಈವರೆಗೆ  79.91 ಕೋಟಿ ರೂ. ಪ್ರಧಾನಿ ಅವರ  ವಿದೇಶಿ  ಪ್ರಯಾಣಕ್ಕೆ ವೆಚ್ಚವಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!