ಜೆಸಿಐ ಪಾರ್ಕ್‌ನಲ್ಲಿ ಗಿಡ ನೆಟ್ಟು ಹುಟ್ಟುಹಬ್ಬ ಆಚರಿಸಿದ : ಪ್ರಶಾಂತ್ ದೊಡ್ಡಮನೆ

ಸೊರಬ ತಾಲ್ಲೂಕಿನ ದೊಡ್ಡಮನೆ ರಾವಪ್ಪ ಶ್ರೀಧರ್ ಸೇವಾ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಜೇಸಿಐನ ಗೋ ಗ್ರೀನ್ ನ ವಿಶೇಷ ವಲಯಾಧಿಕಾರಿಯಾದ ದೊಡ್ಡಮನೆ ಪ್ರಶಾಂತ್ ಇವರ ಜನ್ಮದಿನದ ಪ್ರಯುಕ್ತವಾಗಿ ಸೊರಬ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಜಡೆಯಲ್ಲಿ ಜೇಸಿಐ ಪಾರ್ಕಿಗೆ ಗಿಡಗಳನ್ನು ಕೊಟ್ಟು , ಆ ಗಿಡಗಳನ್ನು ನೆಟ್ಟು ಹಾಗೂ ಜೆಸಿಐ ಪಾರ್ಕ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಲು ಧನ ಸಹಾಯ ಮಾಡುವುದರ ಮೂಲಕ ಜನ್ಮದಿನವನ್ನು ಆಚರಿಸಲಾಯಿತು .

ಇದೇ ಸಂದರ್ಭದಲ್ಲಿ ಪ್ರಶಾಂತ್ ದೊಡ್ಡಮನೆ ಜೇಸಿಐನ ಗೋಗ್ರೀನ್ ವಲಯ ಅಧಿಕಾರಿಯಾಗಿ ಪರಿಸರ ಸಂರಕ್ಷಣೆ ಹಾಗೂ ಹಸಿರೀಕರಣಕ್ಕೆ ಸಂಬಂಧಿಸಿದಂತೆ ಜೇಸಿಐನ ವಲಯ ಇಪ್ಪತ್ತ್ನಾಲ್ಕು ರ ಹನ್ನೆರಡು ಜಿಲ್ಲೆಗಳಲ್ಲಿ ಪರ್ಯಾವರಣ ಸಪ್ತಾಹ ಎಂಬ ಏಳು ದಿನದ ಪರಿಸರ ಸಂರಕ್ಷಣೆ ಕಾರ್ಯಕ್ರಮದ, ಜೆಸಿಐ ಸೊರಬ ಸಿಂಧೂರ,ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ , ಜಡೆ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ನ ಮಕ್ಕಳ ಸೈಕಲ್ ಜಾಥಾವನ್ನು ಜಡೆ ಸಂಸ್ಥಾನ ಮಠದ ಡಾ॥ ಮಹಾಂತ ಸ್ವಾಮೀಜಿಯವರು ಉದ್ಘಾಟಿಸಿದರು .

ಪರಿಸರ ಸಂರಕ್ಷಣೆ ಸೈಕಲ್ ಜಾಥಾದ ನಂತರ ಜಡೆ ಸರ್ಕಾರಿ ಪ್ರೌಢಶಾಲೆಯ ಜೆಸಿಐ ಪಾರ್ಕ್ ಗೆ ಗಿಡಗಳನ್ನು ವಿತರಿಸಿ ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಹಾಗೂ ಜೂನ್ ತಿಂಗಳು ಕಳೆದರೂ ಮಳೆಯಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ , ಮರಗಿಡಗಳನ್ನು ನಾಶ ಮಾಡಿದರೆ ಇನ್ನು ಮುಂದಿನ ಪೀಳಿಗೆ ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಪ್ರಶಾಂತ್ ದೊಡ್ಡಮನೆ ವಿಷಾದವನ್ನು ವ್ಯಕ್ತಪಡಿಸಿದರು .

ಇತ್ತೀಚಿನ ದಿನಗಳಲ್ಲಿ ಯುವ ಜನತೆಯು ಜನ್ಮದಿನದ ಸಂತೋಷದ ನೆಪದಲ್ಲಿ ಮೋಜು ಮಸ್ತಿ ಮಾಡುತ್ತಾ ಮದ್ಯಪಾನ ಧೂಮಪಾನ ಸೇವಿಸುತ್ತಾ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಪ್ರಶಾಂತ್ ದೊಡ್ಡಮನೆ ಇವರು ಸರ್ಕಾರಿ ಶಾಲೆಗಳಲ್ಲಿ ಗಿಡ ನೆಡುವುದರ ಮೂಲಕ ಜನ್ಮ ದಿನ ಆಚರಿಸಿರುವುದು ಯುವ ಜನತೆಗೆ ಮಾದರಿಯಾಗಿದೆ ಎಂದು ಜಡೆ ಸಂಸ್ಥಾನ ಮಠದ ಡಾ॥ ಮಹಾಂತ ಸ್ವಾಮೀಜಿ ಯವರು ತಿಳಿಸಿದರು .
ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲೆಯ ಎಸ್. ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಶಿವಕುಮಾರ್ ಗೌಡ್ರು , ಮುಖ್ಯಶಿಕ್ಷಕರಾದ ಗಿರಿಧರ್ ರಾಯ್ಕರ್ ,ಜಿಲ್ಲಾ ಪರ್ಯಾವರಣ ವಾಹಿನಿಯ ಮಾಜಿ ಸದಸ್ಯರಾದ ಪತ್ರಕರ್ತ ಲಕ್ಷ್ಮೀಕಾಂತ,ಎಸ್ಡಿಎಂಸಿ ಸದಸ್ಯರಾದ ಅರ್ಚನಾ, ಗೀತಾ , ಶಿಕ್ಷಕರಾದ ಶೋಭಾ ,ರವಿಕುಮಾರ್, ಶಂಕರ್ ಗೌಡ ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!