ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯು ಸೆನ್ ಪೊಲೀಸರಿಂದ ಬಂಧನ

ಉಡುಪಿ : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸೆನ್ ಪೊಲೀಸರು ಉಡುಪಿ ನಗರದಲ್ಲಿ ಬಂಧಿಸಿದ್ದಾರೆ. ಆರೋಪಿಯು ಮಹಾರಾಷ್ಟ್ರ ಲಾತೂರು ಜಿಲ್ಲೆಯ ಅವಿನಾಶ್ ಎಂದು ತಿಳಿದು ಬಂದಿದೆ.
ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಅವಿನಾಶ್ ದಿಗಂಬರ್ ಲೋಖಂಡೆ ಎಂಬ ಆರೋಪಿಯನ್ನು ಜಿಲ್ಲಾ ಸೆನ್ ಅಪರಾಧ ಪೊಲೀಸರು ಬಂಧಿಸಿದರು. ಆರೋಪಿಯಿಂದ 2 ಕೀಲೊ 20 _ಗ್ರಾಂ ಗಾಂಜಾ ಮತ್ತು ಮೊಬೈಲ್ ಫೋನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಒಟ್ಟು 45,000 ಸಾವಿರ ಮೌಲ್ಯದ ವಸ್ತುಗಳು ಎಂದು ಅಂದಾಜಿಸಲಾಗಿದೆ.
ಉಡುಪಿ ಜಿಲ್ಲಾ ಎಸ್ಪಿ ನೀಶಾ ಜೇಮ್ಸ್ ಅವರ ನಿರ್ದೇಶನದಲ್ಲಿ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಸೆನ್ ಅಪರಾಧ ಪೊಲೀಸ್ ನಿರೀಕ್ಷಕರಾದ ಸೀತಾರಾಮ್ ಮತ್ತು ಅವರ ತಂಡದ ಪಿ.ಎಸ್.ಐ ಲಕ್ಷ್ಮಣ್ ಮತ್ತು ಸಿಬ್ಬಂದಿಗಳಾದ ರಾಘವೇಂದ್ರ ಉಪ್ಪೂರು,ಪ್ರವೀಣ್,ಕೃಷ್ಣ ಪ್ರಸಾದ್,ಸಂಜಯ್,ನಾಗೇಶ್ ರವರು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.