ಕವನ
ನನ್ನನ್ನು ಕಳೆದುಕೊಂಡ ಕುಶಿಯಲ್ಲಿ ಅವಳಿದ್ದಾಳೆ…
ನನ್ನ ನೋವುಗಳ ಮದ್ಯೆ ಅವಳ ಕುಶಿಯನ್ನು ಕಂಡು ಸಂತಸ ಪಡುತ್ತಿದ್ದೇನೆ.
ಹೃದಯದ ಕೂಗಿಗೆ ನಾನು ನಿಷ್ಕರುಣಿಯಾದರೂ ಕಣ್ಣುಗಳು ಜೊತೆ ನೀಡಿವೆ…
ಕಣ್ಣೀರಿನೊಂದಿಗೆ ನಾನು ಕಟ್ಟಿದ ಕನಸಿನ ಮಹಲುಗಳು ಕುಸಿದು ಧರೆಗುರುಳುತ್ತಿವೆ.
ಅದು ಹೇಗೆ ನಿಶ್ಯಬ್ಧವಾಗಿ ತೊರೆದೆ ನನ್ನನ್ನು?
ತಲೆಯಿಂದ ಕೂದಲು ಜಾರಿದಂತೆ.
ನಿನ್ನ ತುಂಟ ನಗುವನ್ನು ಕಣ್ತುಂಬಿಕೊಳ್ಳುತ್ತಾ…
ನಿನ್ನಪ್ಪುಗೆಯ ಸಾಂತ್ವಾನವನ್ನನುಭವಿಸುತ್ತಾ…
ಹುಣ್ಣಿಮೆಯ ಕಡಲಿನ ಬಳಿ ಮೈ ಚಾಚಿ ಮಲಗಿ
ಕನಸುಗಳ ನಕ್ಷತ್ರ ಎಣಿಸುತ್ತಿದ್ದವನಿಗೆ…
ಅಮವಾಸ್ಯೆಯಾದದ್ದು ತಿಳಿಯಲೇ ಇಲ್ಲವಲ್ಲೆ…
ಬೇಡ ಇನ್ನೊಮ್ಮೆ ಮನಸು ಬದಲಾಯಿಸಬೇಡ ನನಗಾಗಿ
ನಿನ್ನಿಷ್ಟದಂತೆ ನೀನಿರುವೆಯೆಂಬುದೇ ನನಗಿರುವ ಆನಂದ
ಬದುಕಿನ ಕೊನೆಯ ಕ್ಷಣದವರೆಗೂ ನಿನ್ನಾನಂದಕ್ಕಾಗಿಯೇ ಮಿಡಿಯುವ ಹೃದಯವೊಂದಿತ್ತು
ಅನ್ನುವುದು ನಿನಗೆ ತಿಳಿಯದೇ ಹೋಗಲಿ….
ಭಾವನೆಗಳ ವ್ಯಸನಿ