ಕವನ
ನೀವು ಹಾಕುವ ಕಣ್ಣೀರು ನೂರಾರು ಕಥೆಗಳನ್ನು ಹೇಳಬಹುದು, ಅದು ನಿಮ್ಮ ಮನಸ್ಸಲ್ಲಿರುವ ನೋವನ್ನು ಹೊರ ಹಾಕಲಿರುವ ಒಂದು ಮಾಧ್ಯಮ,
ಎಲ್ಲವನ್ನೂ ನಂದಿಸಿಬಿಡುತ್ತೆ, ಕ್ಷಣದಲ್ಲೇ ನಿಮಗೆ ಬಿಡುಗಡೆ,
ಅದನ್ನು ನೊಂದ ಮನಸ್ಸೆಂದಾದರೂ ಹೇಳಿ, ಆದರೆ ಮೌನ ಹೃದಯದ ಭಾವಗಳು ನಿಮಗೆ ಕಾಣಲಾರವು,
ಅದು ಕುಲುಮೆಯ ಬೆಂಕಿಯಂತೆ, ಸುಡುತ್ತಾ ಇರುತ್ತೆ, ನಂದಿಸಲು ಕಣ್ಣೀರೆ ಬರದು, ಅದು ಮಡುಗಟ್ಟಿದ ಭಾವ.
ಕಣ್ಣೀರು ಇತರರನ್ನು ಕರಗಿಸುತ್ತೆ, ಆದರೆ ಹೃದಯದ ಶೋಕ ಆತನನ್ನೇ ಕರಗಿಸುತ್ತೆ.
ರಾಜಮಣಿ ರಾಮಕುಂಜ.