ಕೊರೋನಾ ವಾರಿಯರ್ಸ್ ಆಗಲು ಪ್ರಧಾನಿ ಮೋದಿ ಕರೆ

ನವದೆಹಲಿ: ಇಂದು ನಾವೆಲ್ಲರೂ ಯುದ್ಧ ಸನ್ನಿವೇಶದ ಮಧ್ಯದಲ್ಲಿದ್ದೇವೆ, ಅದು ಕೊರೋನಾ ವೈರಸ್ ವಿರುದ್ಧದ ಯುದ್ಧ.ಈ ಯುದ್ಧದಲ್ಲಿ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತಿದೆ. ಸಾರ್ವಜನಿಕರು, ಜನಸೇವಕರು, ಅಧಿಕಾರಿಗಳು ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಹೋರಾಟವಿದು. ಇಲ್ಲಿನ ಪ್ರತಿಯೊಬ್ಬ ಪ್ರಜೆ ಕೊರೋನಾ ಯುದ್ಧವನ್ನು ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅವರು ಇಂದು ತಮ್ಮ ಆಕಾಶವಾಣಿಯ ತಿಂಗಳ ಕಾರ್ಯಕ್ರಮ ಮನದ ಮಾತಿನಲ್ಲಿ ಮುಖ್ಯವಾಗಿ ಕೊರೋನಾ ವೈರಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.

ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ರನ್ನು coronawarriors.gov.in ಪೋರ್ಟಲ್ ಮೂಲಕ ಸಂಪರ್ಕಿಸುವಂತೆ ಒತ್ತಾಯಿಸಿದರು. ಇತ್ತೀಚೆಗೆ ಆರಂಭಗೊಂಡ ಈ ಪೋರ್ಟಲ್ ನಲ್ಲಿ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದಾರೆ ಎಂದರು.

ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೋನಾ ವಾರಿಯರ್ಸ್ ಆಗಬಹುದು ಎಂದರು.

ರಾಜ್ಯ ಸರ್ಕಾರಗಳನ್ನು ಶ್ಲಾಘಿಸಿದ ಪ್ರಧಾನಿ: ಕೊರೊನಾ ವಿರುದ್ಧ ಎಲ್ಲ ರಾಜ್ಯ ಸರ್ಕಾರಗಳೂ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೊರನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಮಹತ್ವದ್ದು. ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು.

ಕಳೆದ ತಿಂಗಳು 63ನೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿಯವರು ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ಪರಿಣಾಮ ಮತ್ತು ದೇಶದ ಪರಿಸ್ಥಿತಿ ಬಗ್ಗೆಯೇ ಹೆಚ್ಚು ಮಾತನಾಡಿದ್ದರು. ಈ ಬಾರಿಯ ಮನ್‌ ಕಿ ಬಾತ್‌ಗಾಗಿ ಕೆಲವು ಸೂಕ್ಷ್ಮ ವಿಚಾರಗಳನ್ನು ಸಿದ್ಧಪಡಿಸಿರುವುದಾಗಿ ಮೋದಿಯವರು ಶನಿವಾರ ಟ್ವೀಟ್ ಮಾಡಿದ್ದರು

Leave a Reply

Your email address will not be published. Required fields are marked *

error: Content is protected !!