ಅಕ್ಟೋಬರ್ 2 ರಿಂದ ಪ್ಲಾಸ್ಟಿಕ್ ನಿಷೇಧ?
ನವದೆಹಲಿ: ಪುನರ್ ಬಳಕೆಯಾದ ಪ್ಲಾಸ್ಟಿಕ್ಗೆ ಜಗತ್ತು ಗುಡ್ ಬೈ ಹೇಳುವ ಕಾಲ ಸನ್ನಿಹಿತವಾಗಿದೆ .
ಅಕ್ಟೋಬರ್–2 ಮಹಾತ್ಮಾ ಗಾಂಧಿ ಜಯಂತಿ. ಅಂದು ಭಾರತವು ಆರು ಬಗೆಯ ಪ್ಲಾಸ್ಟಿಕ್ಗಳ ಬಳಕೆಯನ್ನು ನಿಷೇಧಿಸುತ್ತಿದೆ. ಪ್ಲಾಸ್ಟಿಕ್ ಚೀಲಗಳು, ಕಪ್ಗಳು, ತಟ್ಟೆಗಳು, ಬಾಟಲಿಗಳು, ಸ್ಟ್ರಾಗಳು ಈ ಪಟ್ಟಿಯಲ್ಲಿವೆ.
ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಹವಾಮಾನ ಬದಲಾವಣೆ ಬಿಕ್ಕಟ್ಟಿನ ಕುರಿತ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಾನವ ಶ್ರೇಯೋಭಿವೃದ್ಧಿಯು ಪರಿಸರದೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ಈ ಜಗತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
‘ಭಾರತದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ವ್ಯಾಪಕವಾಗಿ ನಿರ್ಬಂಧಿಸಲಾಗುವುದು. ಉತ್ಪಾದನೆ, ಬಳಕೆ, ಆಮದಿನ ಮೇಲೂ ನಿಷೇಧ ಹೇರಲಾಗುವುದು ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ,’ ಎಂದು ಇತ್ತೀಚೆಗಷ್ಟೇ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.
ದಿನದಿಂದ ದಿನಕ್ಕೆ ಬೃಹತ್ ಸಮಸ್ಯಯಾಗಿ ಕಾಡುತ್ತಿರುವ ಪ್ಲಾಸ್ಟಿಕ್ ಬಗ್ಗೆ ಜಗತ್ತು ಆತಂಕಕ್ಕೀಡಾಗಿದೆ. ಅದರಲ್ಲೂ ಸಾಗರದ ಒಡಲಲ್ಲಿ ಶೇ. 50ರಷ್ಟು ಮರುಬಳಕೆಯಾಗದ ಪ್ಲಾಸ್ಟಿಕ್ ಸೇರಿದ್ದು, ಜಲಚರಗಳಿಗೆ ಮಾರಕವಾಗಿ ಪರಣಿಮಿಸಿದೆ. ಇದು ಮಾನವರ ಆಹಾರ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮಗಳ ಬೀರುತ್ತಿದೆ ಎಂದು ವರದಿಗಳು ಹೇಳುತ್ತಿವೆ.