ಕಳ್ತೂರಿನಲ್ಲಿ ಪಿಕ್ ಅಪ್ ಪಲ್ಟಿ,ಪಿ.ಡಬ್ಲ್ಯೂಡಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಹೆಬ್ರಿ: ಪಿಕ್ ಅಪ್ ಪಲ್ಟಿಯಾದ ಘಟನೆ ಕಳ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆಗೆ ತಾಗಿಕೊಂಡೆ ಜಿಯೋ ಕಂಪೆನಿಯವರು ಕೇಬಲ್ ಸಂಪರ್ಕಕ್ಕಾಗಿ ಇತ್ತೀಚಿಗೆ ಹೊಂಡ ತೆಗೆದಿದ್ದು ಈ ಘಟನೆಗೆ ಕಾರಣ ಎನ್ನಲಾಗಿದೆ.
ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯ ಸಂಪೂರ್ಣ ಜವಬ್ದಾರಿ ಪಿ.ಡಬ್ಲ್ಯೂ ಇಲಾಖೆಯಾದ್ದಾಗಿದ್ದು, ರಸ್ತೆಯಿಂದ ಕೆಲ ದೂರದಲ್ಲಿ ಕೇಬಲ್ ಮತ್ತಿತ್ತರ ಕೆಲಸಗಳಿಗೆ ಹೊಂಡ ಮಾಡಬೇಕು ಎಂಬ ನಿಯಮವಿದ್ದರೂ, ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯದಿಂದ ಹಾಗೂ ಪಂಚಾಯತಿಯ ಬೇಜಾವ್ದಾರಿಯಿಂದ ಜಿಯೋ ಕಂಪೆನಿಯವರು ರಸ್ತೆಯಂಚಿನಲ್ಲಿ ಹೊಂಡಗಳನ್ನು ತೆಗೆದಿದ್ದು ಇಂತಹ ಅನಾಹುತಗಳಿಗೆ ಎಡೆಮಾಡಿಕೊಟ್ಟಿದ್ದಾರೆ.
ಮಳೆಗಾಲ ಆಗಿರುವುದರಿಂದ ಇಂತಹ ಅನಾಹುತಗಳು ನಡೆಯುತ್ತಿದ್ದರೂ ಇಲಾಖೆಯಾಗಲೀ,ಪಂಚಾಯತಾಗಲೀ ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆ ಅಂಚಿನ ಹೊಂಡಗಳನ್ನು ಸರಿಯಾಗಿ ಮುಚ್ಚಬೇಕು ಹಾಗೂ ಸೂಚನ ಫಲಕಗಳನ್ನು ಅಳವಡಿಸಬೇಕು ಇಲ್ಲವಾದಲ್ಲಿ ಗ್ರಾಮಸ್ಥರು ಇಲಾಖೆಯ ವಿರುದ್ಧ ಬೀದಿಗಳಿಯುತ್ತೇವೆ’ ಎಂದು ಪ್ರಗತಿಪರ ಕೃಷಿಕ ಮಿಥುನ್ ಶೆಟ್ಟಿ ತಿಳಿಸಿದ್ದಾರೆ.