ಪಾಲಕ್ ಗೊಜ್ಜು
ಬೇಕಾಗುವ ಸಾಮಗ್ರಿ
1 ಕಟ್ ಪಾಲಕ್
5 ಹಸಿಮೆಣಸು
ಹುಣಸೆಹಣ್ಣು
ಉಪ್ಪು
ಕೊತ್ತಂಬರಿ ಬೀಜ (1 ಚಮಚ )
ಮಾಡುವ ವಿಧಾನ
ಒಲೆಯ ಮೇಲೆ ಪಾತ್ರೆಗೆ ಸ್ವಲ್ಪ ನೀರು, ಪಾಲಕ್ ಸೊಪ್ಪು, ಮೆಣಸು, ಹುಣಸೆ ಹಣ್ಣು,ಕೊತ್ತಂಬರಿ ಬೀಜ ಹಾಕಿ ಬೇಯಿಸಿ ಕೊಳ್ಳಿ ನಂತರ ಅದನ್ನ ಬೇರೆ ಪ್ಲೇಟಿಗೆ ಹಾಕಿ ತಣಿಸಿಕೊಳ್ಳಿ.. ಮಿಕ್ಸಿ ಜಾರಿಗೆ ಕಾಯಿತುರಿ ಹಾಗು ಬೇಯಿಸಿದ ಮಿಶ್ರಣವನ್ನ ಹಾಕಿ ರುಬ್ಬಿಕೊಳ್ಳಿ ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಉದ್ದಿನಕಾಳು , ಸಾಸಿವೆ , ಕರಿಬೇವಿನ ಒಗ್ಗರಣೆ ಹಾಕಿ ನಂತರ ಈ ರುಬ್ಬಿದ ಮಿಶ್ರಣವನ್ನ ಬಾಣಲೆಗೆ ಹಾಕಿ ನೀರಿನ ಅಂಶ ಹೋಗುವರೆಗೆ ಕುದಿಸಿ ಪ್ರಯಾಣದ ಸಂದರ್ಭದಲ್ಲಿ ಚಪಾತಿಗೆ ಸೂಪರ್ ಜೊತೆ ಹಾಗು ಬಿಸಿ ಅನ್ನದ ಜೊತೆ ಕೂಡ ತಿನ್ನಬಹುದು …
ಲೀಲಾವತಿ ಐತಾಳ್
ವಕ್ವಾಡಿ