ಭಾರತದಲ್ಲಿದ್ದ 60 ಸಾವಿರ ವಿದೇಶಿಗರು ತವರಿಗೆ ರವಾನೆ: ವಿದೇಶಾಂಗ ಇಲಾಖೆ

ನವದೆಹಲಿ: ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಭಾರತದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಸುಮಾರು 60 ಸಾವಿರ ವಿದೇಶಿಗರನ್ನು ಅವರ ತವರು ರಾಷ್ಟ್ರಗಳಿಗೆ ರವಾನೆ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ದೇಶದ ವಿವಿಧ ರಾಜ್ಯಗಳಲ್ಲಿದ್ದ ಸುಮಾರು 72 ರಾಷ್ಟ್ರಗಳ 60 ಸಾವಿರ ವಿದೇಶಿಗರನ್ನು ಅವರ ತವರು ದೇಶಗಳಿಗೆ ರವಾನೆ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ ಅವರು, ದೇಶದಲ್ಲಿರುವ ವಿದೇಶಿ ಪ್ರಜೆಗಳನ್ನು ಅವರ ಸ್ವರಾಷ್ಟ್ರಗಳಿಗೆ ರವಾನೆ  ಮಾಡಲಾಗಿದೆ. ಅಂತೆಯೇ ವಿದೇಶಗಳಲ್ಲಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ಕುರಿತು ಚರ್ಚೆಗಳು ಕೂಡ ನಡೆದಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಹೇಳಿದರು.

ಅಂತೆಯೇ ವಿದೇಶಗಳಲ್ಲಿ ನಿರಾಶ್ರಿತರಾಗಿರುವ ಭಾರತೀಯರೊಂದಿಗೆ ಆನ್ ಲೈನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಂಬಂಧ ಸರ್ಕಾರ ಮೆಗಾ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಭಾರತೀಯ ನೌಕಾಪಡೆಯ ನೌಕೆಗಳನ್ನು ಸರ್ವಸನ್ನದ್ಧ  ಸ್ಥಿತಿಯಲ್ಲಿರಿಸಲಾಗಿದೆ. ಇದಲ್ಲದೆ ವಿಮಾನಗಳನ್ನೂ ಕೂಡ ಬಳಕೆ ಮಾಡಲಾಗುತ್ತದೆ. ಲಾಕ್ ಡೌನ್ ಮುಕ್ತಾಯದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

1 thought on “ಭಾರತದಲ್ಲಿದ್ದ 60 ಸಾವಿರ ವಿದೇಶಿಗರು ತವರಿಗೆ ರವಾನೆ: ವಿದೇಶಾಂಗ ಇಲಾಖೆ

Leave a Reply

Your email address will not be published. Required fields are marked *

error: Content is protected !!