ಸಂಘ ಸಂಸ್ಥೆಗಳಿರುವುದು ಸಮಾಜದ ನೂನ್ಯತೆಗಳನ್ನು ಸರಿಪಡಿಸಲು
ಕುಂದಾಪುರ: ಕುಂದಾಪುರದ ಆರ್ಡಿ ಎಂಬಲ್ಲಿ ಕಡುಬಡತನದಿಂದ ಜೀವನಸಾಗಿಸುತ್ತಿದ್ದ ಕುಟುಂಬವೊಂದು ಮಗಳ ಮದುವೆಯ ಖರ್ಚಿಗಾಗಿ ಹೆಣಗಾಡುತ್ತಿತ್ತು. ಆಗ ನೆರವಿಗೆ ಬಂದವರು ಗ್ರಾಮ ಪಂಚಾಯತಿ ಸದಸ್ಯರು,ಸಮಾಜಸೇವಕರಾದ ಗುಣಾಕರ್ ಶೆಟ್ಟಿ.
ಇವರು ಬೆಂಗಳೂರಿನ ಬಂಟರ ಸಂಘವನ್ನು ಸಂಪರ್ಕಿಸಿ ಯುವತಿಯ ಮದುವೆಗೆ ಬಂಟರ ಸಂಘದ ವತಿಯಿಂದ ಮಾಂಗಲ್ಯದ ಸರವೊಂದನ್ನು ಕೊಡಿಸಿ ಬಡಕುಟುಂಬಕ್ಕೆ ನೆರವಾಗಿದ್ದಾರೆ. ಮಂಜುನಾಥ ಸ್ವಾಮಿಯ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಯುವತಿಯ ಮದುವೆ ನೆರವೇರಿತು.
ಜಾತಿ ಸಂಘಗಳಿರುವುದು ಸಮಾಜದ ನೂನ್ಯತೆಗಳನ್ನು ಸರಿಪಡಿಸಲು,ಅಶಕ್ತ ಕುಟುಂಬಗಳಿಗೆ ನೆರವಾಗಲು ಎಂಬುದನ್ನು ಬಂಟರ ಸಂಘ ಬೆಂಗಳೂರು, ಆರ್ಡಿ ಗುಣಾಕರ್ ಶೆಟ್ಟಿ ಮತ್ತು ನಿಶಾಂತ್ ಶೆಟ್ಟಿಯವರ ಈ ಸಮಾಜಮುಖಿ ಕಾರ್ಯದಿಂದ ಸಾಬೀತು ಮಾಡಿದ್ದಾರೆ