ಆನ್ ಲೈನ್ ಮಲ್ಲಿಗೆ
ಮಲ್ಲಿಗೆ ಕೃಷಿ ಕರಾವಳಿಗರ ಆದಾಯದ ಮೂಲ ಎಷ್ಟೋ ಮನೆಗಳಲ್ಲಿ ಮಲ್ಲಿಗೆ ಅವಲಂಬಿಸಿಕೊಂಡಿದ್ದಾರೆ ಕರಾವಳಿಯ ಹವಾಮಾನ ಈ ಬೆಳೆಗೆ ಪೂರಕವಾಗಿದೆ. ಉಡುಪಿಯಲ್ಲಿ ಕೆಲವೊಂದು ಪ್ರದೇಶದ ಜನರು ಅದರಲ್ಲೂ ಶಂಕರಪುರ ಕಟಪಾಡಿ ಜನರು ಪ್ರತಿ ದಿನ ತಮ್ಮ ಹೆಚ್ಚಿನ ಗಂಟೆಗಳನ್ನ ಮಲ್ಲಿಗೆ ಗಿಡದ ಬುಡದಲ್ಲಿ ಕಳೆದು ಬಿಡುತ್ತಾರೆ .
ಮಲ್ಲಿಗೆ ಅಂದರೆ ಸಾಕು ಮಕ್ಕಳಿಂದ ಹಿರಿಯರವರೆಗೆ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಇಷ್ಟ ಪಡುವ ಹೂ ..ಪ್ರತಿಯೊಂದು ವಿಶೇಷ ಕಾರ್ಯಕ್ರಮಕ್ಕೆ ಮಲ್ಲಿಗೆ ಬೇಕೇ ಬೇಕು.. ಮಲ್ಲಿಗೆ ಸೀಸನ್ ಲಿ ಈ ಹೂವಿಗೆ ಬಂಗಾರದ ಬೆಲೆ ಆದರೆ ಇದರ ಹಿಂದೆ ಇರೋ ಕೆಲಸ ಮಾತ್ರ ಬಹಳ ಪ್ರಯಾಸಕರವಾದದ್ದು ಉಡುಪಿ ಮಲ್ಲಿಗೆ ಬೆಳೆಗಾರರ ಸಂಘದಿಂದ ಬೇಡಿಕೆ ಮತ್ತು ಉತ್ಪಾದನಾ ಆದಾರದ ಮೇಲೆ ಬೆಲೆ ನಿಗದಿಯಾಗುತ್ತದೆ
ಈ ಮಲ್ಲಿಗೆ ಗಳಿಗೆ ಕೇವಲ ಇಲ್ಲಿ ಮಾತ್ರವಲ್ಲದೆ ಸಾಗರದಾಚೆಗೂ ಅಷ್ಟೇ ಬೇಡಿಕೆ ಇದೆ ಕರಾವಳಿಯ ಮಲ್ಲಿಗೆ ಹೂವುಗಳು ಅದೇ ದಿನ ದುಬೈಗೆ ಕೂಡ ರಫ್ತ್ಗು ಆಗುತ್ತದೆ… ಮಲ್ಲಿಗೆ ಕೃಷಿ ಅಷ್ಟು ಸುಲಭದ ಮಾತಲ್ಲ ಸರಿಯಾದ ಹವಾಮಾನ ನೀರಿನ ಸರಿಯಾದ ಪೂರೈಕೆ ಗಿಡಗಳ ಸರಿಯಾದ ಆರೈಕೆ ಹೀಗೆ ಮಲ್ಲಿಗೆ ಗಿಡಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗುತ್ತದೆ … ಮಲ್ಲಿಗೆ ಗಿಡಗಳನ್ನು ಬಾಧಿಸುವ ರೋಗಗಳು ಹಲವು
ಇದರ ಬಗ್ಗೆ ಸರಿಯಾದ ಮಾಹಿತಿ ಬೆಳೆಗಾರರಿಗೆ ಇರದೇ ಈ ಕೃಷಿಯಿಂದ ಕೈ ಸುಟ್ಟುಕೊಂಡವರು ಎಷ್ಟೋ ಜನ. ಹಾಗಾಗಿ ಮಲ್ಲಿಗೆ ಬೆಳೆಗಾರರಿಗಾಗಿಯೇ ಬಂದಿದೆ ಹೊಸ ಆಪ್ .
ಟ್ಯಾಕಿಯಂಟ್ ಸಂಸ್ಥೆ ಅಭಿವೃದ್ಧಿ ಪಡಿಸಿದ ಈ ಆಪ್ ನಲ್ಲಿ ಅನೇಕ ಮಾಹಿತಿಗಳು ಲಭ್ಯವಿದೆ ಉಡುಪಿ ಮಲ್ಲಿಗೆ ಎಂಬ ಹೆಸರಿನ ಈ ಆಪ್ ನಲ್ಲಿ ನಾಟಿ ಮಾಡುವ ವಿಧಾನ , ನೀರುಣಿಸುವ ವಿಧಾನ ಮಲ್ಲಿಗೆ ಗೆ ಬಾಧಿಸುವ ಕಾಯಿಲೆಗಳ ವಿವರ ,ಕೆಂಪು ಕೀಟಗಳಂಥ ಅನೇಕ ಕೀಟಗಳು ಬೆಳೆ ಹಾಳು ಮಾಡುವುದನ್ನ ನಿಯಂತ್ರಿಸುವ ಕ್ರಮಗಳು ,ಉಡುಪಿ ಮಲ್ಲಿಗೆ ಬೆಳವಣಿಗೆಯ ಬಗ್ಗೆ ಇರುವ ಕಾರ್ಯಕ್ರಮಗಳ ವಿವರ , ಸರಿಯಾದ ಸಮಯಕ್ಕೆ ಬೇಕಾದ ಉಪಯುಕ್ತ ಮಾಹಿತಿಗಳು ,ಅಷ್ಟೇ ಅಲ್ಲದೆ ಸುಮಾರು ಅಕ್ಟೋಬರ್ ಯಿಂದ ಇವತ್ತಿನವರೆಗಿನ ಮಲ್ಲಿಗೆ ದರಗಳು ಕೂಡ ಈ ಆಪ್ ನಲ್ಲಿ ಲಭ್ಯವಿದೆ.
ಮಲ್ಲಿಗೆಯ ಈ ಆಪ್ ಉಡುಪಿ ಮಲ್ಲಿಗೆ ಎಂಬ ಹೆಸರಿನಲ್ಲಿ ನೀವು ಗೂಗಲ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದು ಕೃಷಿಗೆ ಇನ್ನಷ್ಟು ಉತ್ತೇಜನ ಸಿಕ್ಕಲ್ಲಿ ಹೊಲಗಳಿಗೆ ಇಳಿಯುವ ರೈತರ ಸಂಖ್ಯೆಯು ಕೂಡ ಅಧಿಕ ವಾಗುತ್ತದೆ ಇಲ್ಲವಾದರೆ ಎಲ್ಲ ಗದ್ದೆ ಗಳು ಕಾಂಕ್ರೆಟ್ ಕಾಡಾಗಬಹುದು..