ಸದಸ್ಯರ ಅಭಿವೃದ್ಧಿಗೆ ಸಹಕಾರಿಗಳ ಕೊಡುಗೆ ಅಪಾರ ಮಂಜುನಾಥ ಎಸ್.ಕೆ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿಯಮಿತ ಬೆಂಗಳೂರು, ಇದರ ವತಿಯಿಂದ ಉಡುಪಿ ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿಗಳಿಗಾಗಿ ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ವೆಂಕಟರಮಣ ವಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಸತ್ಯೇಂದ್ರ ಪೈ ಇವರು ಉದ್ಘಾಟಿಸಿ ಮಾತನಾಡಿ ಸಹಕಾರಿಗಳು ಈಗಿನ ವಿದ್ಯಮಾನದಲ್ಲಿ ಆರ್ಥಿಕಕತೆಯ ಜೊತೆಗೆ ಸಾಮಾಜಿಕವಾಗಿ ಅತ್ಯಂತ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಿವೆ ಎಂದರು.

ಮೈಸೂರು ಪ್ರಾಂತೀಯ ನಿರ್ದೇಶಕರಾದ ಶ್ರೀಯುತ ಮಂಜುನಾಥ್ ಎಸ್. ಕೆ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿಗಳು ಪ್ರಸ್ತುತ ಬದಲಾಗುತ್ತಿರುವ ಆರ್ಥಿಕ ಸ್ಥಿತಿಗಳಿಗೆ ಒಗ್ಗಿಕೊಂಡು ತಮ್ಮ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಅವರನ್ನ ಸಧೃಡವಾಗಿರುವ ಕಾರ್ಯಗಳಲ್ಲಿ ತೊಡಗಬೇಕೆಂದು ತಿಳಿಸಿದರು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಅನೂಪ್ ದೇಶಪಾಂಡೆ, ವಕೀಲರು, ಧಾರವಾಡ ಹಾಗೂ ಸಹಕಾರಿಗಳ ಸಹಾಯಕ ನಿಬಂಧಕರು ಶ್ರೀ ಮಂಜುನಾಥ್ ಸಿಂಗ್ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಹಿರಿಯ ಅಧಿಕಾರಿಗಳಾದ ಶ್ರೀ ಗುರುಪ್ರಸಾದ್ ಬಂಗೇರ, ಉಡುಪಿ ಜಿಲ್ಲಾ ಸೌಹಾರ್ದ ಸಂಯೋಜಕರಾದ ಶ್ರೀ ವಿಜಯ್ ಬಿ.ಎಸ್ ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ., ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಭುವನೇಶ್ ಪ್ರಭು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!