ಅ.10: ಲೈಟ್ ಫಿಶಿಂಗ್ ನಿಷೇಧಿಸಿ ಉಗ್ರಹೋರಾಟ
ಉಡುಪಿ: ಬುಲ್‌ಟ್ರಾಲ್ ಮತ್ತು ಲೈಟ್ ಫಿಶಿಂಗ್ ಮೀನುಗಾರಿಕೆಗೆ ಕೇಂದ್ರ ಹಾಗೂ ರಾಜ್ಯ ಸರರ್ಕಾರ ನಿಷೇಧಿಸಿದರೂ ನಿನ್ನೆ ಮಲ್ಪೆ ಸಮುದದಲ್ಲ್ರಿ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬುಲ್ ಟ್ರಾಲ್ ಬೋಟ್‌ಗಳನ್ನು ಮತ್ತು 12 ಜನ ಮೀನುಗಾರರನ್ನು ವಶಕ್ಕೆ ಪಡೆದುಕೊಂಡರೂ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿದ್ದಾರೆಂದು ಆರೋಪಿಸಿ ಇಂದು ಬೆಳಿಗ್ಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಮೀನುಗಾರಿಕಾ ಇಲಾಖೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್‌ಗೆ ಸರಕಾರ ನಿರ್ಬಂಧವಿದ್ದರೂ ನಿಯಮ ಉಲ್ಲಂಘಿಸುವ ಬೋಟ್ ಹಾಗೂ ಮಾಲಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇಲಾಖೆಗೆ ಮುತ್ತಿಗೆ ಹಾಕಲಾಯಿತು. ಗುರುವಾರ ರಾತ್ರಿ ತಿರುಮಲ ಹೆಸರಿನ ಎಮ್.ಎಮ್. ಕೆಎ02- 3060 ಮತ್ತು ಇನ್ನೊಂದು 370 ಬೋಟ್ಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಬಿಟ್ಟಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ಅನುಮತಿ ಪಡೆದು 12 ನಾಟಿಕಲ್ ಒಳಗೆ ಮಂಗಳೂರು,ಉಡುಪಿಯ ಬೋಟ್ಗಳು ಮೀನುಗಾರಿಕೆ ನಡೆಸುತ್ತಿದ್ದಾರೆ ಇದರ ವಿರುದ್ಧವು ಕ್ರಮ ತೆಗೆದುಕೊಳ್ಳದಿರುವುದಕ್ಕೆ ಆಕ್ರೋಶವ್ಯಕ್ತಪಡಿಸಿದರು.
ಇದರಿಂದ ನಾಡ ದೋಣಿ ಮೀನುಗಾರರು ಯಾವುದೇ ಮೀನುಗಾರಿಕೆ ಇಲ್ಲದ ಉಪವಾಸ ಇರುವಂತಾಗಿದೆಂದು ಸಂಘದ ಅಧ್ಯಕ್ಷ ಚಂದ್ರಕಾಂತ್ ಕರ್ಕೆರ ಅಸಾಹಯಕೆ ವ್ಯಕ್ತಪಡಿಸಿದರು. ಮೀನುಗಾರಿಕಾ ಉಪನಿರ್ದೆಶಕರಿಗೆ ಮನವಿ ನೀಡಿ ಯಾವುದೇ ಪ್ರಯೋಜವಾಗಿಲ್ಲ, ಅದಕ್ಕಾಗಿ ಸಚಿವರಿಗೆ,ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಬುಲ್ ಟ್ರಾಲ್ ಲೈಟ್ ಫಿಶಿಂಗ್ ವಿರುದ್ಧ ಕ್ರಮಕೈಗೊಳ್ಳದ ಕಾರಣ ಅಕ್ಟೋಬರ್ 10 ರಂದು ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಜಿಲ್ಲಾ ವ್ಯಾಪ್ತಿಯ ಸಮಸ್ತ ಸಾಂಪ್ರದಾಯಿಕ ಮೀನುಗಾರರು ಮಲ್ಪೆಯಲ್ಲಿ ಉಗ್ರಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಪ್ರವೀಣ್ ಶ್ರೀಯಾನ್, ರತ್ನಾಕರ ಕರ್ಕೆರ,ಲಕ್ಷ್ಮೀನಾರಾಯಣ, ವಾಸು ಕರ್ಕೆರ,ಹರೀಶ ತಿಂಗಳಾಯ ಉಪಸ್ಥಿತರಿದ್ದರು.