101 ಯೋಗ ಶಿಬಿರಕ್ಕೆ ಚಾಲನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಂಗಣದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ರವರ  ನವೆಂಬರ್ 16 -20 ರತನಕ ನಡೆಯುವ ಉಚಿತ ಬ್ರ ಹತ್ ವಿರಾಟ್ ಯೋಗ ಶಿಬಿರದ ಪ್ರಯುಕ್ತ  ಪೂರ್ವಭಾವಿಯಾಗಿ ನಡೆಸಲು ಉದ್ದೇಶಿಸಿರುವ 101 ಯೋಗ ಶಿಬಿರಕ್ಕೆ ಹಾಗೂ ಸ್ವಚ್ಛಭಾರತ್ ಅಭಿಯಾನಕ್ಕೆ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿಧ್ಯಾದೀಶತೀರ್ಥ ಪಾದರು ದೀಪ  ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.


ರಾಜ್ಯ ಪ್ರಭಾರಿಗಳಾದ ಯೋಗಾಚಾರ್ಯ ಭವರಲಾಲ್ ಜೀ, ಜಿಲ್ಲಾ ಸಂರಕ್ಷಕ  ರಾಘವೇಂದ್ರ ಆಚಾರ್ಯ,ವಲಯ ಜಿಲ್ಲಾ ಸಮಿತಿ ಪ್ರಭಾರಿಗಳಾದ ಕರಂಬಳ್ಳಿ ಶಿವರಾಮ್ ಶೆಟ್ಟಿ, ಲೀಲಾ ಅಮೀನ್, ಡಿ. ಟಿ.ಅಮೀನ್, ರಾಮ್ ಕರ್ಕೇರ,ಜಗದೀಶ್ ಕುಮಾರ್, ಉದಯಕುಮಾರ್ ಶೆಟ್ಟಿ ,ರವೀಂದ್ರ ನಾಯಕ್,ಲಕ್ಷ್ಮೀ ಸುವರ್ಣ ,ಅಜಿತ್ ಕುಮಾರ್ ಶೆಟ್ಟಿ,ಕೆ.ರಾಘವೇಂದ್ರ ಭಟ್,ಲಕ್ಷ್ಮಣ್ ಭಂಡಾರ್ಕರ, ಅಜೀವ ಸದಸ್ಯರಾದ ವಿಶ್ವನಾಥ್ ಭಟ್,ಸದಾನಂದ ರಾವ್ ,ಸುರೇಶ್ ಭಕ್ತರವರು ಉಪಸ್ಥಿಯಲ್ಲಿದ್ದರು.
 ಒಂದು ತಾಸು ಸಮಯ ಯೋಗಾಚಾರ್ಯ ಭವರಲಾಲ್ ಜೀ ಯವರಿಂದ  ಯೋಗ ಶಿಬಿರ ನಡೆಯಿತು. RPL -4  ಯೋಗ ಪರೀಕ್ಷೆಗೆ ಹಾಜಾರಾಗಿ ಉತ್ತೀರ್ಣಗೊಂಡ ಯೋಗಾರ್ತಿಗಳವರಿಗೆ ಸರ್ಟಿಫಿಕೇಟ್ ವಿತರಣೆ ನಡೆಯಿತು.
 

Leave a Reply

Your email address will not be published. Required fields are marked *

error: Content is protected !!