ಭಾರತೀಯ ರೈಲ್ವೆ ಖಾಸಗೀಕರಣ ಯೋಜನೆ ಇಲ್ಲ: ಸಚಿವ ಪಿಯೂಶ್ ಗೋಯಲ್
ನವದೆಹಲಿ: ಭಾರತೀಯ ರೈಲ್ವೇಸ್‌ನ್ನು ಖಾಸಗೀಕರಣಗೊಳಿಸುವ ಸುದ್ದಿಯ ಬಗ್ಗೆ ರೈಲ್ವೆ ಸಚಿವ ಪಿಯೂಶ್ ಗೋಯಲ್ ಸ್ಪಷ್ಟನೆಯನ್ನು ನೀಡಿದ್ದಾರೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಪಿಯೂಶ್, ರೈಲ್ವೆಯನ್ನು ಖಾಸಗೀಕರಣಕ್ಕೊಳಪಡಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ ಸುರೇಂದ್ರನಾಥ್ ನಗರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಪಿಯೂಶ್, ನೂರು ದಿನಗಳ ಯೋಜನೆಯಲ್ಲಿ ಎರಡು ರೈಲುಗಳನ್ನು ಐಆರ್ಸಿಟಿಸಿಗೆ ನೀಡುವ ಪ್ರಸ್ತಾವನೆಯನ್ನು ಇಲಾಖೆ ಸಲ್ಲಿಸಿತ್ತು ಎಂದಿದ್ದಾರೆ. ತನ್ನ ಏಳು ಉತ್ಪಾದನಾ ಘಟಕವನ್ನು ಇಂಡಿಯನ್ ರೈಲ್ವೆ, ರೋಲಿಂಗ್ ಸ್ಟಾಕ್ ಕಂಪೆನಿಗೆ ಸಲ್ಲಿಸುವ ಬಗ್ಗೆ ಪ್ರಸ್ತಾವವಿರಿಸಿತ್ತು, ಆದರೆ ಇದನ್ನು ವಿರೋಧಿಸಿದ ಕಾರ್ಮಿಕ ಒಕ್ಕೂಟ. ಐಆರ್‌ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆ ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಈಗ, ಸಚಿವರೇ ಈ ವಿಷಯವನ್ನು ಅಲ್ಲಗೆಳದಿದ್ದಾರೆ.